ನಟ ಕಿಚ್ಚ ಸುದೀಪ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ‘ವಿಕ್ರಾಂತ್ ರೋಣ’ದಿಂದ ಅವರೀಗ ಅಭಿಮಾನಿಗಳ ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಕನ್ನಡ ಭಾಷೆ, ನಾಡು – ನುಡಿಯಲ್ಲಿ ಕಿಚ್ಚ ಅವರ ಪ್ರೇಮ ಸದಾ ಮುಂದೆ. ಕನ್ನಡ ಚಿತ್ರರಂಗವನ್ನು ಬೆಳೆಸುತ್ತಿರುವ, ಕನ್ನಡದ ಪ್ರತಿಭೆಯಲ್ಲಿ ಸುದೀಪ್ ಅವರು ಕೂಡ ಒಬ್ಬರು.
ಇತ್ತೀಚೆಗೆ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ‘ಕನ್ನಡ್ ಸಿನಿಮಾ’ ಅಂಥ ಹೇಳಿದ್ದರು. ಆ ಕೂಡಲೇ ಕಿಚ್ಚ ಅವರು ಅದು ‘ಕನ್ನಡ್’ ಅಲ್ಲ ಕನ್ನಡ ಅಂಥ ಹೇಳಿ, ಆ ವ್ಯಕ್ತಿಯ ತಪ್ಪನ್ನು ಸರಿ ಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮತ್ತೊಂದು ಇಂಥದ್ದೇ ವಿಡಿಯೋ ಓಡಾಡುತ್ತಿದೆ. ಸಂದರ್ಶನವೊಂದರಲ್ಲಿ ಮಹಿಳಾ ನಿರೂಪಕಿಯೊಬ್ಬರು ಕನ್ನಡವನ್ನು ‘ಕನ್ನಡ್’ ಅಂಥ ಹೇಳಿದ್ದಾರೆ.
ಇದಕ್ಕೆ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲೇ ಕನ್ನಡ್ ಅಲ್ಲ, ಮೇಡಮ್ ‘ಕನ್ನಡ’ ಅಂಥ ಹೇಳಿದ್ದಾರೆ. ‘ಕ್ಷಮಿಸಿ ಸರ್ ಕಲಿಯುತ್ತಿದ್ದೇನೆ’ ಎಂದು ಹೇಳಿದ ಆ ನಿರೂಪಕಿಗೆ ‘ಹಿಂದಿ ಎಂದಿಗೂ ಹಿಂದ್ ಆಗುವುದಿಲ್ಲ. ಅದೇ ರೀತಿ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.



