ಕನ್ನಡಿಗರ ನೆಚ್ಚಿನ ಸ್ಟಾರ್ ನಟರುಗಳಲ್ಲಿ ಒಬ್ಬರು, ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಬಾದ್ ಷಾಹ್ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಅಪ್ಡೇಟ್ ಗೆ ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ತಮಿಳಿನಲ್ಲಿ ‘ಕಬಾಲಿ’ ರೀತಿಯ ಹಿಟ್ ಸಿನಿಮಾಗಳನ್ನ ನೀಡಿರುವ ‘ವಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಮಾಡುತ್ತಿರುವುದಾಗಿ ಕಿಚ್ಚ ಸುದೀಪ್ ಈಗಾಗಲೇ ಘೋಷಣೆ ಮಾಡಿದ್ದರು. ಇನ್ನೂ ಹೆಸರಿಡದ ಈ ಸಿನಿಮಾಗೆ ‘ಕಿಚ್ಚ46’ ಎಂದೇ ಎಲ್ಲರೂ ಕರೆಯುತ್ತಿದ್ದಾರೆ. ಅದರ ಟೀಸರ್ ಶೂಟಿಂಗ್ ಕೂಡ ಆರಂಭವಾಗಿದ್ದು, ಚಿತ್ರೀಕರಣವನ್ನ ಸುದೀಪ್ ಆರಂಭಿಸಿರುವ ವಿಡಿಯೋ ಝಲಕ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಇಟ್ಟಿದ್ದು, ಸ್ವತಃ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ದಿನಾಂಕ ಘೋಷಣೆ ಮಾಡಿದ್ದಾರೆ.


ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು ನಟ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಡುತ್ತಿರುವುದು ತಿಳಿದಿರುವ ವಿಚಾರ. ಈ ಬಗ್ಗೆ ಸ್ವತಃ ಸುದೀಪ್ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಈ ಹೊಸ ಸಿನಿಮಾವನ್ನ ಕೆ ಪಿ ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದು, ಚಿತ್ರದ ಮೊದಲ ನೋಟದ ಝಲಕ್ ಈ ಭಾನುವಾರ, ಜೂನ್ 25ರಂದು ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ಅಂದರೇ ಜೂನ್ 27ಕ್ಕೆ ಬಹುನಿರೀಕ್ಷಿತ ಎಲ್ಲರೂ ಕಾಯುತ್ತಿರುವ ‘ಕಿಚ್ಚ46’ ನ ಸ್ಲೀಕ್ ಪೀಕ್ ರೀತಿಯ ಟೀಸರ್ ನ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಲಿದೆ ಚಿತ್ರತಂಡ. ಈ ಅಪ್ಡೇಟ್ ಅನ್ನು ಸ್ವತಃ ಕಿಚ್ಚ ಸುದೀಪ್ ಅವರು ಹಂಚಿಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ ನಂತರ ಸುದೀಪ್ ಅವರ ಯಾವ ಚಿತ್ರದ ಸುದ್ದಿಯೂ ಇರಲಿಲ್ಲ. ಇದೀಗ ಮೂರು ಸ್ಕ್ರಿಪ್ಟ್ ಅನ್ನು ಒಪ್ಪಿಕೊಂಡಿರುವುದಾಗಿ ಸುದೀಪ್ ಹೇಳಿಕೊಂಡಿದ್ದರು. ಅಂತೆಯೇ ಈ ಸಾಲಿನ ಮೊದಲ ಸಿನಿಮಾ ‘ಕಿಚ್ಚ46’ ನ ಟೀಸರ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಜೂನ್ 27ಕ್ಕೆ ತಿಳಿಸಲಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಸಂತಸ ನೀಡಿದೆ.



