ನಟ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷಗಳು ತುಂಬಿವೆ. ‘ತಾಯವ್ವ’ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಿಚ್ಚ ‘ಸ್ಪರ್ಶ’, ‘ಹುಚ್ಚ’ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪ್ರತಿಭೆಯ ಅಡಿಪಾಯವನ್ನು ಹಾಕಿದ ‘ಬಾದ್ ಷಾ’ ನ ಸಿನಿಮಾಯಾನಕ್ಕೆ 27 ವರ್ಷಗಳು ತುಂಬಿವೆ.
ಕನ್ನಡ ಮಾತ್ರವಲ್ಲದೆ ಅನ್ಯ ಭಾಷೆಯಲ್ಲೂ ಕಿಚ್ಚನ ಅಭಿಮಾನಿಗಳು ಬೇಜಾನ್ ಇದ್ದಾರೆ. ರಾಜಮೌಳಿ ಅವರೊಂದಿಗೆ ಕಿಚ್ಚನ ಸ್ನೇಹ ಆತ್ಮೀಯವಾಗಿದೆ.
ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಕಿಚ್ಚನ ಸುದೀರ್ಘ ಬಣ್ಣದ ಲೋಕದ ಪಯಣಕ್ಕೆ ಶುಭಕೋರಿದ್ದಾರೆ.
ಸದ್ಯ ಸಿಸಿಎಲ್ ಕ್ರಿಕೆಟ್ ನಲ್ಲಿ ಬ್ಯುಸಿ ಇರುವ ಕಿಚ್ಚ ಮುಂದಿನ ಸಿನಿಮಾವನ್ನು ಯಾವಾಗಾ ಘೋಷಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಸಿನಿಮಾ ರಂಗಕ್ಕೆ ಬಂದು 27 ವರ್ಷ ಕಳೆದ ಸಂತಸವನ್ನು ಕಿಚ್ಚ ಪೋಸ್ಟ್ ಮಾಡಿ ಸರ್ವರಿಗೂ ಧನ್ಯವಾದವನ್ನು ತಿಳಿಸಿದ್ದಾರೆ.
ಖಂಡಿತವಾಗಿಯೂ ಇದು ಸ್ಮರಣೀಯ ಪ್ರಯಾಣ. ಚಿತ್ರರಂಗದಲ್ಲಿ 27 ವರ್ಷಗಳ ಕಾಲ ಹಲವಾರು ಅದ್ಭುತ ಪ್ರತಿಭೆಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ. ನನಗೆ ಸ್ಫೂರ್ತಿ ನೀಡಿದ, ನನ್ನನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಸಹಕಾರ ನೀಡಿದ ಆ ಪ್ರತಿಭೆಗಳಿಗೆ ಧನ್ಯವಾದ. ನನ್ನ ಬೆನ್ನಿಗೆ ನಿಂತ ನಿಮ್ಮೆಲ್ಲರಿಗೂ ನನ್ನ ನಮಸ್ಕಾರ’ ಎಂದು ಸುದೀಪ್ ಹೇಳಿದ್ದಾರೆ.
ನನಗೆ ಅವಕಾಶ ನೀಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ. ನನ್ನ ಮೇಲೆ ನಂಬಿಕೆ ಇಟ್ಟ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಧನ್ಯವಾದ ಹೇಳದೇ ಇದ್ದರೆ ಅಪೂರ್ಣ ಎನಿಸುತ್ತದೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಮೆಚ್ಚಿನ ನಟ ಕಾಮನ್ ಡಿಪಿ ಹಾಕಿ ಸಂಭ್ರಮಿಸಿದ್ದಾರೆ.

