ಬಾದ್ ಷಾ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಅವತಾರದಲ್ಲಿ ಪ್ಯಾನ್ ಇಂಡಿಯಾದಲ್ಲಿ ಅಬ್ಬರಿಸಿಯಾಗಿದೆ. ಈ ದೊಡ್ಡ ಗೆಲುವು ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವುದು ಸೀಕ್ರೆಟ್ ಆಗಿಯೇ ಉಳಿದಿದೆ.
ಆದರೆ ಈ ಬಗ್ಗೆ ದೊಡ್ಡ ಅಪ್ಡೇಟ್ ವೊಂದು ಹೊರಬಿದ್ದಿದೆ. ಮೊದಲೇ ಹೇಳಿದಂತೆ ಕಿಚ್ಚನ ಹವಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿದೆ ಬಿಟೌನ್, ಟಿಟೌನ್ ನಲ್ಲೂ ಸುದೀಪ್ ಅವರಿಗೆ ಅಭಿಮಾನಿಗಳು ಬೇಜಾನ್ ಇದ್ದಾರೆ.
ಸದ್ಯ ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಕಿಚ್ಚ ತನ್ನ ಮುಂದಿನ ಸಿನಿಮಾದ ಬಗ್ಗೆ ಒಂದು ಸುತ್ತು ಮಾತುಕತೆಯೂ ನಡೆಸಿ ಆಗಿದೆಯಂತೆ.
ಕಿಚ್ಚನ ಸಿನಿಮಾಕ್ಕೆ ನಿರ್ಮಾಣ ಮಾಡುತ್ತಿರುವುದು ತಮಿಳು ಚಿತ್ರರಂಗದ ದೈತ್ಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್.
ಹೌದು ರಜನಿಕಾಂತ್ ಅವರ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ. ಅದು ಕಿಚ್ಚನ ಸಿನಿಮಾಕ್ಕೆನ್ನುವುದು ವಿಶೇಷ.
ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ಬಂಡವಾಳ ಹಾಕಿತ್ತು. ಜನವರಿ ಕಿಚ್ಚನ ಸಿನಿಮಾ ಸಟ್ಟೇರಲಿದೆ ಎನ್ನಲಾಗುತ್ತಿದೆ.

