ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಿನಿಮಾರಂಗದಲ್ಲಿ ಉತ್ತುಂಗಕ್ಕೇರಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದ್ದು ಕೆಜಿಎಫ್ ಸರಣಿಯ ಸಿನಿಮಾ.
ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದ ಕೆಜಿಎಫ್ -2 ವರ್ಷಾಂತ್ಯದಲ್ಲಿ ಮತ್ತೊಂದು ದಾಖಲೆಯನ್ನು ಪಡೆದುಕೊಂಡಿದೆ.
ಕೆಜಿಎಫ್ 2, ಆರ್ಆರ್ಆರ್, ದಿ ಕಾಶ್ಮೀರ್ ಫೈಲ್ಸ್, ಪೊನ್ನಿಯಿನ್ ಸೆಲ್ವನ್: ಪಾರ್ಟ್ 1, ಬ್ರಹ್ಮಾಸ್ತ್ರ: ಪಾರ್ಟ್ 1: ಶಿವ, ವಿಕ್ರಮ್ ಹಾಗೂ ಡಾಕ್ಟರ್ ಸ್ಟ್ರೇಂಜ್: ಇನ್ ದಿನ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ಚಿತ್ರಗಳು ‘ಬುಕ್ ಮೈ ಶೋ’ನ ಆ್ಯಪ್ ಮಾಡಿರುವ ವರದಿಯಲ್ಲಿ ಜನಪ್ರಿಯ ಸಿನಿಮಾಗಳ ಸಾಲಿಗೆ ಸೇರಿದೆ.
ಕೆಜಿಎಫ್ – 2 ಸಿನಿಮಾ ಟಿಕೆಟ್ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದಿದೆ. ಬುಕ್ ಮೈ ಶೋನಲ್ಲಿ ಬಾಹುಬಲಿ -2 ಸಿನಿಮಾಕ್ಕೆ ಅತೀ ಹೆಚ್ಚು ಟಿಕೆಟ್ ಬುಕ್ ಆಗಿತ್ತು. ಈಗ ಈ ಸಿನಿಮಾದ ದಾಖಲೆಯನ್ನು ಕೆಜಿಎಫ್ -2 ಮುರಿದಿದೆ.
ಕೆಜಿಎಫ್ -2 ಸಿನಿಮಾದ 1.77 ಕೋಟಿ ಟಿಕೆಟ್ಗಳು ಮಾರಾಟವಾಗಿವೆ. ಆ ಮೂಲಕ ಬಾಹುಬಲಿ – 2 ವಿನ ದಾಖಲೆಯನ್ನು ಮುರಿದಿದೆ.

