ಪ್ರಶಾಂತ್ ನೀಲ್ ಅವರ ‘ಕೆಜಿಎಫ್ -2’ ಸೃಷ್ಟಿಸಿದ ಹವಾ ಸಿನಿ ರಂಗದಲ್ಲಿ ಹೋಗುವಂಥದ್ದಲ್ಲ. ಸಿನಿಮಾ ಇತಿಹಾಸ ಪುಟದಲ್ಲಿ ದಾಖಲಾಗುವಂಥದ್ದು.
1000 ಕೋಟಿಗೂ ಅಧಿಕ ದಾಖಲೆ ಕಲೆಕ್ಷನ್ ಮಾಡಿ ಚಿತ್ರ ಸ್ಯಾಂಡಲ್ ವುಡ್ ಹಾಗೂ ದಕ್ಷಿಣ ಚಿತ್ರ ರಂಗಕ್ಕೆ ದೊಡ್ಡ ಬೂಸ್ಟ್ ಕೊಟ್ಟಿದೆ.


ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ ಮೇಲೆ ರಾಕಿಭಾಯ್ ಸದ್ಯ ಕುಟುಂಬದೊಂದಿಗೆ ಕೂಲ್ ಮೂಡ್ ನಲ್ಲಿದ್ದಾರೆ. ಅಭಿಮಾನಿಗಳು ಅವರ ಮುಂದಿನ ಚಿತ್ರ ಯಾವುದು, ಕೆಜಿಎಫ್ 3 ಯಾವಾಗ ಬರುತ್ತದೆ ಅಂಥ ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.


ದೇಶ – ವಿದೇಶದಲ್ಲೂ ಸದ್ದು ಮಾಡಿರುವ ಕೆಜಿಎಫ್ – 2 ಈಗ ಮತ್ತೊಮ್ಮೆ ಸೌಂಡ್ ಮಾಡಿದೆ. ಅದು ಜಪಾನ್ ನಲ್ಲಿ.
ಹೌದು ಜಪಾನ್ ನ ಬುನ್ ಶುನ್ ಎನ್ನುವ ಪತ್ರಿಕೆಯೊಂದು ಕೆಜಿಎಫ್ – 2 ಚಿತ್ರದ ಯಶಸ್ಸಿನ ಪಯಣವನ್ನು ಹಾಗೂ ಮೇಕಿಂಗ್ ಕುರಿತು ಪುಟ ಇಡೀ ಬರೆದು ಗುಣಗಾನ ಮಾಡಿದೆ. ಈ ಚಿತ್ರ ಭಾರತದಲ್ಲಿ ಕೋವಿಡ್ ಬಳಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದು ಬರೆದಿದೆ.
ಇದರೊಂದಿಗೆ ರಾಜಾಮೌಳಿ ಅವರ ‘ಆರ್ ಆರ್ ಆರ್’ ಚಿತ್ರದ ಬಗೆಯೂ ವಿಶೇಷವಾದ ಬರಹವನ್ನು ಬರೆದಿದೆ.
ಜಪಾನ್ ಪತ್ರಿಕೆಯ ಈ ಬರಹ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

