ಚಂದನವನದಲ್ಲಿ ಮತ್ತೊಂದು ಹೊಸ ತಂಡ ತನ್ನ ಸಿನಿಮಾ ಯಾನವನ್ನು ಆರಂಭಿಸಿದೆ.
‘ಕೆರೆಬೇಟೆ’ ಚಿತ್ರ ತಂಡ ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿದೆ.
ಗುರುಶಿವ ಹಿತೈಶಿ ಕಥೆ ಬರೆದು ನಿರ್ದೇಶನ ಮಾಡಲಿರುವ ‘ಕೆರೆಬೇಟೆ’ ಚಿತ್ರವನ್ನು ಜನಮನ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಜಯಶಂಕರ್ ಪಟೇಲ್ ನಿರ್ಮಾಣ ಮಾಡಲಿದ್ದಾರೆ.
ಜೋಕಾಲಿ ಮತ್ತು ರಾಜಹಂಸ ಖ್ಯಾತಿಯ ಗೌರಿಶಂಕರ್ ಎಸ್ ಅರ್ ಜಿ ನಾಯಕ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಹಳ್ಳಿ ಸೊಗಡಿನ ನೈಜತೆಯೊಂದಿಗೆ ಮೂಡಿ ಬರುತ್ತಿರುವ ಒಂದು ಪ್ರೇಮ ಕಥೆ, ಮಲೆನಾಡ ಭಾಗದ ಕೆರೆಬೇಟೆ ಅನ್ನೋ ಸಂಸ್ಕೃತಿಯನ್ನು ಚಿತ್ರದ ಒಂದು ಮೂಖ್ಯ ಭಾಗವಾಗಿ ಅಳವಡಿಸಿಕೊಳ್ಳಲಾಗಿದೆ.




ಮೊದಲ ಹಂತದ ಒಂದು ತಿಂಗಳ ಚಿತ್ರೀಕರಣವನ್ನು ಇದೇ ತಿಂಗಳ 10 ರಿಂದ ಸಿಗಂಧೂ, ಕೋಗಾರ್ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಬಿಂದು ಶಿವರಾಮ್ (ನಾಯಕಿ ಹೊಸ ಪರಿಚಯ), ಗೋಪಾಲ್ ದೇಶ್ ಪಾಂಡೆ, ಸಂಪತ್, ಹರಿಣಿ, ರಘುರಾಜನಂದ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್‌ರಾಜ್ ಮುಂತಾದ ಕಲಾವಿದರು ಇದ್ದಾರೆ.
ಜ್ಞಾನೇಶ್ ಸಂಕಲನ, ಡಿಫ್‌ರೆಂಟ್ ಡ್ಯಾನಿ ಸಾಹಸ ಕಂಬಿರಾಜು ನೃತ್ಯ ನಿರ್ದೇಶನ ಮಾಡಲಿದ್ದಾರೆ.

