

ನಟ ಜಯರಾಮ್ ಕಾರ್ತಿಕ್( ಜೆಕೆ) ಸ್ಯಾಂಡಲ್ ವುಡ್ ನಲ್ಲಿ ‘ ಆ ಕರಾಳ ರಾತ್ರಿ’ ಮುಗಿಸಿ ಮತ್ತೆ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಈ ಹಿಂದೆ ‘ಅಶ್ವನಿ ನಕ್ಷತ್ರ‘ ಧಾರಾವಾಹಿಯಲ್ಲಿ ಪ್ರಧಾನ ಪಾತ್ರವನ್ನು ಮನ ಗೆದ್ದಿದ್ದ ಜೆಕೆ ಆ ಬಳಿಕ ಸಿನಿಮಾ ರಂಗದಲ್ಲಿ ಸಕ್ರಿಯರಾದರು. ಕನ್ನಡದಲ್ಲಿ ಫೇಮ್ ಸಿಕ್ಕ ಮೇಲೆ ಜೆಕೆ ಹಿಂದಿ ಸೀರಿಯಲ್ ನಲ್ಲೂ ಬೇಡಿಕೆಯ ಕಲಾವಿದರಾದರು.


ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನ ಅವತಾರದಲ್ಲಿ ವೀಕ್ಷಕರನ್ನು ಸೆಳೆದಿದ್ದ ಅವರು ಇದೀಗ ಬಹು ಸಮಯದ ಬಳಿಕ ಮತ್ತೆ ಹಿಂದಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎನ್ನುವ ಸೀರಿಯಲ್ ನಲ್ಲಿ ಆಲಿಬಾಬನಾಗಿ ಜನರನ್ನು ರಂಜಿಸಲಿದ್ದಾರೆ. ಇದು ಹಿಂದಿಯ ಸೋನಿ ಸಬ್ ನಲ್ಲಿ ಪ್ರಸಾರವಾಗಲಿದ್ದು, ಮಾನ್ ಸಿಂಗ್ ಆ್ಯಕ್ಷನ್ ಕಟ್ ಹೇಳಿದ್ದಾರೆ.


ಈ ಬಗ್ಗೆ ಜೆಕೆ ತಮ್ಮ
ಖಾತೆ ಫಸ್ಟ್ ಲುಕ್ ಹಂಚಿಕೊಂಡು. ಕಾಯುವಿಕೆ ಮುಗಿದಿದೆ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೀರಿಯಲ್ ಶೂಟಿಂಗ್ ಲಡಾಖ್ ನಲ್ಲಿ ಪ್ರಾರಂಭವಾಗಲಿದೆ. ಸೀರಿಯಲ್ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪಬಲ್ಲೆ ಎಂದಿದ್ದಾರೆ.

