ನಮ್ಮಲ್ಲಿ ಅತಿಹೆಚ್ಚು ವೀಕ್ಷಕರು, ಅಭಿಮಾನಿಗಳು ಇರುವುದು ಮುಖ್ಯವಾಗಿ ಎರಡು ವಿಚಾರಗಳಿಗೆ. ಒಂದು ಸಿನಿಮಾ, ಇನ್ನೊಂದು ಕ್ರಿಕೆಟ್. ಈ ಎರಡು ಒಂದಾಗಿ ಪ್ರೇಕ್ಷಕರ ಮುಂದೆ ಬಂದರೆ. ಈ ಕಲ್ಪನೆಗೆ ಜೀವ ತುಂಬಿರುವುದು ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಸರಣಿಯ 2023ನೇ ಆವೃತ್ತಿ ಭರ್ಜರಿ ಸದ್ದಿನ ಜೊತೆಗೆ ಇಂದು (ಫೆಬ್ರವರಿ 18) ಆರಂಭವಾಗಿದೆ. ಮೊದಲ ಪಂದ್ಯವಾಗಿ ನಮ್ಮ ತಂಡ ‘ಕರ್ನಾಟಕ ಬುಲ್ಡೋಜರ್ಸ್’,’ಬೆಂಗಾಲ್ ಟೈಗರ್ಸ್’ ವಿರುದ್ಧ ರಾಯ್ ಪುರದಲ್ಲಿ ಆಡಿದ್ದು, ಭರ್ಜರಿ ಜಯ ಗಳಿಸಿದೆ.
ನಟ ಪ್ರದೀಪ್ ಬೊಗಡಿ ಅವರ ನಾಯಕತ್ವದಲ್ಲಿ ಅಂಕಣಕ್ಕಿಳಿದ ‘ಕರ್ನಾಟಕ ಬುಲ್ಡೋಜರ್ಸ್’ ತಂಡದಲ್ಲಿ ಬಾದ್ ಷಾಹ್ ಕಿಚ್ಚ ಸುದೀಪ, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ರಾಜೀವ್, ಚಂದನ್ ಕುಮಾರ್, ತ್ರಿವಿಕ್ರಮ್, ನಿರೂಪ್ ಭಂಡಾರಿ, ಸುನಿಲ್ ರಾವ್, ಜಯರಾಮ್ ಕಾರ್ತಿಕ್ ಹಾಗು ಕರಣ್ ಆರ್ಯನ್ ಆಟಗಾರರಾಗಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಜಿಷು ಅವರ ನಾಯಕತ್ವದ ‘ಬೆಂಗಾಲ್ ಟೈಗರ್ಸ್’ ತಂಡ ಪ್ರಥಮ 10 ಓವರ್ಸ್ ನ ಇನ್ನಿಂಗ್ ನಲ್ಲಿ 8 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನ ಪೋಣಿಸಿದ್ದರು. ತದನಂತರ ಬ್ಯಾಟಿಂಗ್ ಇಳಿದ ‘ಕರ್ನಾಟಕ ಬುಲ್ಡೋಸರ್ಸ್’ ತಂಡ ನಾಯಕ ಪ್ರದೀಪ್ ಅವರ ರೋಮಾಂಚನಕಾರಿ 51ರನ್ ಗಳ ಆಟದಿಂದ 93ರನ್ ಪೇರಿಸಿ 20ರನ್ ಗಳ ಮುನ್ನಡೆ ಸಾಧಿಸಿದ್ದರು.


ಮರಳಿ ಎರಡನೇ ಇನ್ನಿಂಗ್ ಬ್ಯಾಟಿಂಗ್ ಗೆ ಇಳಿದ ‘ಬೆಂಗಾಲ್ ಟೈಗರ್ಸ್’ ತಂಡ 6 ವಿಕೆಟ್ ನಷ್ಟಕ್ಕೆ 76 ರನ್ ಪೇರಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 57 ರನ್ ಗಳ ಗುರಿ ಇಟ್ಟರು. ಈ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಕೇವಲ 6 ಓವರ್ 4 ಎಸೆತಗಳಲ್ಲಿ, ಇನ್ನು 20 ಎಸೆತ ಬಾಕಿ ಇರುವಾಗಲೇ ಹೊಡೆದು ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡ ಜಯಭೇರಿ ಬಾರಿಸಿತು.
ಪಂದ್ಯದಲ್ಲಿ ನಿರೂಪ್ ಭಂಡಾರಿ ಅವರ ಎಸೆತಗಾರಿಕೆಯ ಎರಡು ಓವರ್ ಗೆ 16 ರನ್ ಗಳನ್ನು ನೀಡಿ 3 ವಿಕೆಟ್ ಪಡೆದಿದ್ದು, ಪ್ರದೀಪ್ ಅವರ 32 ಎಸೆತಗಳ 51 ರನ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ಎರಡು ಓವರ್ ಗೆ ಕೇಕರ್ನಾಟಕ ಬುಲ್ಡೋಜರ್ಸ್ವಲ 5 ರನ್ ನೀಡಿ 2 ವಿಕೆಟ್ ಪಡೆದದ್ದು, ರಾಜೀವ್ ಅವರ 23 ರನ್ ಗಳು ಹಾಗು ಕಿಚ್ಚ ಸುದೀಪ್ ಅವರ ಬಿರುಸಿನ 15 ರನ್ ಗಳು ಅದ್ಭುತ ಪ್ರದರ್ಶನವಾಗಿ ಹೊರಹೊಮ್ಮಿ, ತಂಡದ ಗೆಲುವಿಗೆ ಕಾರಣವಾದವು.
ನಾಯಕ ಪ್ರದೀಪ್ ಹಾಗು ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಕಣಕ್ಕಿಳಿದ ಕರ್ನಾಟಕ ಬುಲ್ಡೋಸರ್ಸ್ ತಂಡ ತಮ್ಮ ಅತ್ಯುತ್ತಮ ಕ್ರಿಕೆಟ್ ಪ್ರದರ್ಶನ ತೋರಿ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ‘ಸಿ ಸಿ ಎಲ್’ ಪಂದ್ಯಾವಳಿಗೆ ಉತ್ತಮ ಆರಂಭವನ್ನೇ ತಂಡ ಕಂಡಿದ್ದಾರೆ. ಇನ್ನು ತಮ್ಮ ಎರಡನೇ ಪಂದ್ಯವಾಗಿ ಇದೆ ಫೆಬ್ರವರಿ 26ರಂದು ‘ಕೇರಳ ಸ್ಟ್ರೈಕರ್ಸ್’ ತಂಡದ ವಿರುದ್ಧ ಜೈಪುರದಲ್ಲಿ ಆಡಲಿದ್ದಾರೆ. ಪಂದ್ಯವನ್ನ ಜೀ ವಾಹಿನಿಗಳಲ್ಲಿ, ಜೀ5 ಆಪ್ ನಲ್ಲಿ, ಜೀ ಪಿಚ್ಚರ್ ಚಾನೆಲ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.



