HomeNews"ಕರಿ ಹೈದ....ಕರಿ ಅಜ್ಜ ..." ಚಿತ್ರದ ಮಹೂರ್ತಕ್ಕೆ ಗಣ್ಯರ ಸಾಥ್

“ಕರಿ ಹೈದ….ಕರಿ ಅಜ್ಜ …” ಚಿತ್ರದ ಮಹೂರ್ತಕ್ಕೆ ಗಣ್ಯರ ಸಾಥ್

ದೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ , ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ “ಕರಿ ಹೈದ….ಕರಿ ಅಜ್ಜ …”.ಸಿನಿಮಾದ ಮುಹೂರ್ತ ಸಮಾರಂಭವು ಇತ್ತೀಚೆಗೆ ನೆರವೇರಿತು.
ಬೆಳ್ತಂಗಡಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಶಾಸಕ ಶ್ರೀ ಹರೀಶ್ ಪೂಂಜರವರು ಕ್ಯಾಮರ ಚಾಲನೆ ಮಾಡಿ ಚಾಲನೆ ನೀಡಿದರು. ಮಾತ್ರಶ್ರೀ ಕಮಲ.ಕೆ.ಸಪಲ್ಯ ಆರಂಭ ಫಲಕ ತೋರಿಸಿದರು.
ಇತ್ತೀಚಿನ ಹಲವಾರು ವರ್ಷಗಳಿಂದ ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂಬ ಸಹವಾಸವನ್ನು ಹಲವಾರು ನಿರ್ಮಾಪಕರು ಯತ್ನಿಸುತ್ತಿದ್ದರು. ಇದೀಗ ಸುಧೀರ್ ಅತ್ತಾವರ್ ಕೊರಗಜ್ಜ ನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಧೀರ್ ನಿರ್ದೇಶನದ ಮರಾಠಿ -ಕನ್ನಡ ಸಿನಿಮಾ ಶೂಟಿಂಗ್ ಸಂಪೂರ್ಣಗೊಂಡು, ಅರೇಬಿಕ್- ಇಂಗ್ಲಿಷ್ ಸಿನಿಮಾ “ಗುಲೇ ಬಕಾವಲಿ” ಮತ್ತು ಮರಾಠಿ-ಕನ್ನಡ ಸಿನಿಮಾ “ಅಗೋ ಳಿ ಮಂಜಣ್ಣ” ಫ್ಲೋರ್ ನಲ್ಲಿ ಇರುವ ಮಧ್ಯೆಯೇ ಇದೀಗ ಸುಧೀರ್ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮುಹೂರ್ತ ನಡೆಸುವ ಮೊದಲು ಕೊರಗಜ್ಜನ ಸಮುದಾಯದ ಪ್ರಮುಖ ವ್ಯಕ್ತಿಗಳು ಡೊಳ್ಳು -ತಮಟೆಗಳ ವಿಶೇಷ ಪೂಜೆಯನ್ನು ಶ್ರೀ ಸುಂದರ ಬೆಳುವಾಯಿ, ಶ್ರೀ ಬಾಬು ಪಾಂಗಳ, ಶ್ರೀ ಬಲ್ ರಾಜ್, ಶ್ರೀ ರಮೇಶ್ ಮೊದಲಾದ ಮಹನೀಯರು ಮತ್ತು ಗುರಿಕಾರರು ಹಳೆಯ ಶೈಲಿಯ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸಿನೆಮಾಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ಖ್ಯಾತ ಖ್ಯಾತ ಹಾಲಿವುಡ್-ಬಾಲಿವೂಡ್ ನಟ ಕಬೀರ್ ಬೇಡಿಯವರು ವಿಶೇಷ ಪಾತ್ರದಲ್ಲಿ ನಟಿಸುದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ.
ಭರತ್ ಸೂರ್ಯ ಎನ್ನುವ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಎಂಟುನೂರು ವರ್ಷಗಳ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಕ್ಯಾಮರಾ, ಸುಧೀರ್- ಕ್ರಷ್ಣ ರವಿ ಸಂಗೀತ, ಸುಧೀರ್ ಅತ್ತಾವರ್ ಕಲೆ ಚಿತ್ರಕ್ಕಿದೆ.
ತ್ರಿವಿಕ್ರಮ ಬೆಳ್ತಂಗಡಿ ನಿರ್ಮಾಣದ ನಾಲ್ಕನೇಯ ಸಿನಿಮಾ ಎನ್ನುವುದ ವಿಶೇಷ.

RELATED ARTICLES

Most Popular

Share via
Copy link
Powered by Social Snap