ಸೆ.30 ರಿಂದ ರಿಷಭ್ ಶೆಟ್ಟಿ ಅವರ ‘ಕಾಂತಾರ’ ರಿಲೀಸ್ ಆಗಲಿದ್ದು, ಇಂದಿನಿಂದ ಪ್ರಿಮಿಯರ್ ಶೋ ಆರಂಭವಾಗಲಿದೆ.


ಕರಾವಳಿ ಕರ್ನಾಟಕದ ಕಂಬಳ ಓಟದ ಸಂಪ್ರದಾಯವನ್ನು ಇಟ್ಟುಕೊಂಡು ಮೂಡಿ ಬಂದಿರುವ ಕಾಂತಾರ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ.
ಟ್ರೇಲರ್ ನಲ್ಲಿ ರಿಷಭ್ ರಗಡ್ ಆಗಿ, ಊರಿನ ಸಂಪ್ರದಾಯವನ್ನು ಉಳಿಸುವ ಯತ್ನದಲ್ಲಿ ಕಂಡರೆ ಪೊಲೀಸ್ ಆಗಿರುವ ಕಿಶೋರ್ ರೆಬೆಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಇಂದಿನಿಂದ ಪ್ರಿಮಿಯರ್ ಶೋ ಆರಂಭವಾಗಲಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಓರಿಯನ್ ಮಾಲ್ ನಲ್ಲಿ ಸಂಜೆ 6:30 ಸಿನಿಮಾಗಳ ನೋಡಲಿದ್ದೇನೆ. ಕುತೂಹಲ ಹೆಚ್ಚಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾಜ್ಯದಲ್ಲಿ ಒಟ್ಟು 50 ಪ್ರಿಮಿಯರ್ ಶೋಗಳಿದ್ದು , ಇದರೊಂದಿಗೆ 25 ಪ್ರಿಮಿಯರ್ ಶೋ ರಾಜ್ಯದ ಹೊರಗೆ ಇರಲಿದೆ ಎಂದು ಚಿತ್ರ ತಂಡ ವಿಷಯವನ್ನು ಹಂಚಿಕೊಂಡಿದೆ.



