ರಿಷಬ್ ಶೆಟ್ಟಿ ಅವರ ʼಕಾಂತಾರʼ ಚಿತ್ರವನ್ನು ನೋಡಿದವರೆಲ್ಲರೂ ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ. ಸೌತ್ ದಿಗ್ಗಜರು, ನಟ- ನಟಿಯರು, ನಿರ್ದೇಶಕರು ಸೇರಿದಂತೆ ಎಲ್ಲರೂ ಸಿನಿಮಾವನ್ನು ಮೆಚ್ಚಿಕೊಂಡು ರಿಷಬ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ʼಕಾಶ್ಮೀರ್ ಫೈಲ್ಸ್ʼ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹಿಂದಿಯಲ್ಲಿ ಡಬ್ ಆಗಿ ಬಂದ ʼಕಾಂತಾರʼವನ್ನು ನೋಡಿ ಸೆಲ್ಫಿ ವಿಡಿಯೋ ಮಾಡಿ ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.
ʼಕಾಂತಾರʼವನ್ನು ನೋಡಿ ಈಗಷ್ಟೇ ಹೊರ ಬಂದಿದ್ದೇನೆ. ಇದೊಂದು ಹೊಸ ಹಾಗೂ ವಿಭಿನ್ನ ಅನುಭವ. ನಾನು ಇದುವರೆಗೆ ಇಂಥ ಚಿತ್ರವನ್ನು ನೋಡಿಲ್ಲ. ರಿಷಬ್ ಶೆಟ್ಟಿ ಅವರಿಹೆ ಹ್ಯಾಟ್ಸಾಫ್ ಹೇಳುತ್ತೇನೆ. ನೀವು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀರ ಎಂದಿದ್ದಾರೆ.
ಚಿತ್ರದಲ್ಲಿ ಕಲೆ, ನಮ್ಮ ಬೇರು ಮಟ್ಟದ ಸೊಗಡನ್ನು ತೋರಿಸಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಅತ್ಯದ್ಭುತ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ದೀಪಾವಳಿ ಹಬ್ಬದ ಬಳಿಕ ನೀವು ಮೊದಲು ಚಿತ್ರವನ್ನು ನೋಡಿ. ಸಿನಿಮಾಸ ಕಥೆ,ಸಂಗೀತ,ನಿರ್ದೇಶನ,ಛಾಯಗ್ರಹಣ ಎಲ್ಲವೂ ಅದ್ಭುತವಾಗಿದೆ. ಇಂಥಹ ಮಾಸ್ಟರ್ ಪೀಸ್ ಚಿತ್ರವನ್ನು ಮಾಡಿದ ರಿಷಬ್ ನಿಮಗೆ ಅಭಿನಂದನೆ ಎಂದು ಹೇಳಿದ್ದಾರೆ.

