ರಿಷಬ್ ಶೆಟ್ಟಿ ಅವರ ʼಕಾಂತಾರʼದ ಬಗ್ಗೆ ಮಾತಾನಾಡದವರಿಲ್ಲ. ಬಹುಶಃ ಇನ್ನು ಸ್ವಲ್ಪ ದಿನಗಳು ಕಳೆದರೆ ಚಿತ್ರ ನೋಡದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಂತಾರದ ಕ್ರೇಜ್ ಹುಟ್ಟುಬಹುದು. ಎಲ್ಲೆಡೆ ಹೌಸ್ ಫುಲ್ ಆಗಿರುವ ಕಾಂತಾರ ಇಂದಿನಿಂದ ಹಿಂದಿಗೆ ಡಬ್ ಆಗಿ ರಿಲೀಸ್ ಆಗಲಿದೆ.
ಮ್ಯೂಸಿಕ್, ಕಥೆ, ಛಾಯಗ್ರಾಹಣ, ನಟನೆ, ಮೇಕಿಂಗ್ ಎಲ್ಲಾ ವಿಷಯದಲ್ಲೂ ʼಕಾಂತಾರʼ ಔಟ್ & ಔಟ್ ಅಂಕ ಪಡೆದುಕೊಂಡಿದೆ. ತುಳುನಾಡಿನ ಕಲ್ಚರ್ ನ್ನು ಭಿನ್ನವಾಗಿ ಪ್ರೆಸೆಂಟ್ ಮಾಡಿದ ರಿಷಬ್ ಅವರಿಗೆ ಎಲ್ಲರೂ ಹ್ಯಾಟ್ಸಾಪ್ ಹೇಳುತ್ತಿದ್ದಾರೆ.
ಈಗಿರುವಾಗಲೇ ಚಿತ್ರ ಮತ್ತೊಂದು ವಿಷಯಕ್ಕೆ ಸದ್ದು ಮಾಡಿದೆ. ಅದು ರೇಟಿಂಗ್ ವಿಷಯದಲ್ಲಿ. ಖಂಡಿತವಾಗಿಯೂ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿರುವುದರಿಂದಲೇ ಈ ರೇಟಿಂಗ್ ಬಂದಿದೆ.
ಐಎಂಡಿಬಿಯಲ್ಲಿ ʼಕಾಂತಾರʼ ಸಿನಿಮಾಕ್ಕೆ ( ಅ.13 ರಂದು) 9.6 ರೇಟಿಂಗ್ ಸಿಕ್ಕಿದೆ. ಭಾರತದಲ್ಲಿ ಯಾವ ಚಿತ್ರಕ್ಕೂ ಈ ರೇಟಿಂಗ್ ಇದುವರೆಗೆ ಸಿಕಿಲ್ಲ. 13000 ವೋಟ್ ಗಳನ್ನು ಕಾಂತಾರ ಪಡೆದುಕೊಂಡಿದೆ. ಈ ಹಿಂದೆ ಬಾಹುಬಲಿ 8.2, ಕೆಜಿಎಫ್ ಚಾಪ್ಟರ್ 2 8.4, ತಮಿಳಿನ ವಿಕ್ರಮ್ 8.4, ಜೈ ಭೀಮ್ 8.9, 777 ಚಾರ್ಲಿ 9 ರೇಟಿಂಗ್ ಗಳನ್ನು ಪಡೆದುಕೊಂಡಿತ್ತು. ʼಕಾಂತಾರʼದೊಂದಿಗೆ ರಿಲೀಸ್ ಆದ ಪೊನ್ನಿಯಿನ್ ಸೆಲ್ವನ್ 8.4 ರೇಟಿಂಗ್ ಪಡೆದುಕೊಂಡಿದೆ.
ಇಲ್ಲಿ ಮಾತ್ರವಲ್ಲದೆ ʼಕಾಂತಾರʼ ಬುಕ್ ಮೈ ಶೋನಲ್ಲೂ 74816 ವೋಟ್ ಗಳನ್ನು ಪಡೆದುಕೊಂಡಿದೆ. 99% ರೇಟಿಂಗ್ ಪಡೆದುಕೊಂಡು ದಾಖಲೆ ಬರೆದಿದೆ.
ಸೆ.28 ರಂದು ʼಕಾಂತಾರʼ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

