ಕಾಂತಾರ ಸಿಜಿಮ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದು ಒಂದು ಸಣ್ಣ ಸಾಮಾನ್ಯ ಬಜೆಟಿನ ಸಿನಿಮಾ ಕೂಡ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಿ ಕೊಟ್ಟಿದೆ. ಸಿನಿಮಾದ ಚರ್ಚೆಗಳು ನಡೆಯುವಾಗ ಇತ್ತೀಚೆಗೆ ಬಂದು ಹವಾ ಸೃಷ್ಟಿಸಿದ ಕಾಂತಾರ ಸಿನಿಮಾದ ಬಗ್ಗೆ ಒಂದಲ್ಲ ಒಂದು ವಿಚಾರದಲ್ಲಿ ಮಾತುಕತೆ ಆಗೇ ಆಗುತ್ತದೆ.
ಈ ಬಾರಿ ನಟ ಕಿಚ್ಚ ಸುದೀಪ್ ರಿಷಬ್ ಶೆಟ್ಟಿ ಅವರ ಕಾಂತಾರದ ಬಗ್ಗೆ ಮಾತನಾಡಿದ್ದಾರೆ.
ಸಿಎನ್‌ಎನ್ ನ್ಯೂಸ್ 18 ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಪ್ಯಾನ್ ಇಂಡಿಯಾ ಸಿನಿಮಾಗಳು ಹೇಗೆ ಗೆಲ್ಲುತ್ತವೆ ಯಾವ ಚಿತ್ರವನ್ನು ಪ್ಯಾನ್ ಚಿತ್ರವನ್ನಾಗಿ ಮಾಡುವುದು, ಇದರ ಬಗ್ಗೆ ಪ್ರೊಡಕ್ಷನ್ ಹೌಸ್ ಗೆ ಯಾವ ರೀತಿ ಒತ್ತಡ ಇರುತ್ತದೆ ಎನ್ನುವ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಇತರ ಭಾಷೆಯ ಅಂದರೆ ಚೈನೀಸ್ ಭಾಷೆಯ ಸಿನಿಮಾಗಳು ಇಂಗ್ಲಿಷ್ ಭಾಷೆಗೆ ಡಬ್ ಆಗಿ ಬಿಡುಗಡೆ ಆದಾಗ ಇಂಗ್ಲಿಷ್ ಪ್ರೇಕ್ಷಕರಿಗೆ ಆ ಸಿನಿಮಾದ ಕಥೆ ಹೊಸತು ಅನ್ನಿಸುತ್ತದೆ. ಆ ಸಿನಿಮಾ ಆ ಭಾಷೆ ಬಿಟ್ಟು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗೆ ಡಬ್ ಆಗಿ ಬಂದರೆ ಅಲ್ಲಿನ ಪ್ರೇಕ್ಷಕರಿಗೆ ಆ ಸಿನಿಮಾಗಳು ಹೊಸತು. ಹಾಗಾಗಿ ಭಾರತದಲ್ಲೂ ಚೈನೀಸ್ ಕೊರಿಯನ್ ಭಾಷೆಗಳು ಗೆಲ್ಲುತ್ತಿವೆ ಎಂದರು.
ಕರ್ನಾಟಕದ ಭೂತಕೋಲದ ಕಥೆಯನ್ನು ಒಳಗೊಂಡ ಸಿನಿಮಾ ಇತರ ರಾಜ್ಯದ ಭಾಷಿಗರು ಮೆಚ್ಚಿಕೊಂಡದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚ,
ಕಾಂತಾರ ನಮ್ಮ ನಾಡಿನ ಕಥೆಯಾದರೂ ಅದು ಬೇರೆ ಭಾಷೆಯ ಪ್ರೇಕ್ಷಕರಿಗೆ ಹೊಸ ಬಗೆಯ ಕಥೆ. ಕಾಂತಾರ ಬೇರೆ ರಾಜ್ಯದ ಭಾಷೆಗೆ ಡಬ್ ಆಗಿ ಬಂದಾಗ ಅಲ್ಲಿನ ಪ್ರೇಕ್ಷಕರಿಗೆ ಅದು ಈ ಹಿಂದೆ ನೋಡದ ಕಥೆ.
ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

