ಮೂಲತಃ ಕನ್ನಡದಲ್ಲಿ ರಿಲೀಸ್ ಆಗಿ ಇತರ ಭಾಷೆಗಳಿಗೆ ಡಬ್ ಆಗಿ ಅಮೋಘ ಯಶಸ್ಸು ಕಂಡ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಈಗ ಮತ್ತೊಂದು ಭಾಷೆಯಲ್ಲಿ ರಿಲೀಸ್ ಆಗಲು ರೆಡಿಯಾಗಿದೆ.
400 ಕೋಟಿಗೂ ಅಧಿಕ ಗಳಿಕೆ ಕಂಡ ಸಿನಿಮಾ ಇತ್ತೀಚೆಗೆ ಅದ್ಧೂರಿಯಾಗಿ ಬೆಂಗಳೂರಿನ ಬಂಟರ ಭವನದಲ್ಲಿ 100 ದಿನ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಈ ವೇಳೆ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಈಗ ಬಂದಿರುವುದು ‘ಕಾಂತಾರ-2’, ಮುಂದೆ ಬರಲಿರುವುದು ಕಾಂತಾರ ಪಾರ್ಟ್ – 1 ಎಂದು ಹೇಳಿ ಬಿಗ್ ಅಪ್ಡೇಟ್ ಕೊಟ್ಟಿದ್ದರು.
ಇದರೊಂದಿಗೆ ಇಂಗ್ಲಿಷ್ ನಲ್ಲೂ ಸಿನಿಮಾ ತೆರೆಗೆ ಬರಲಿದೆ ಎಂದಿದ್ದರು. ಈಗ ಕಾಂತಾರ ಇಂಗ್ಲಿಷ್ ನಲ್ಲಿ ಡಬ್ ಆಗಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಮಾರ್ಚ್ 1 ರಂದು ರಿಲೀಸ್ ಆಗಲಿದೆ ಎನ್ನುವ ಕುರಿತು ವರದಿಯಾಗಿದೆ.
ಈ ಬಗ್ಗೆ ಶೀಘ್ರದಲ್ಲಿ ಸಿನಿಮಾ ತಂಡ ಮಾಹಿತಿ ನೀಡಲಿದೆ ಎನ್ನಲಾಗಿದೆ.
ರಿಷಬ್ ಶೆಟ್ಟಿಯೊಂದಿಗೆ, ಸಪ್ತಮಿ ಗೌಡ, ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದ ಕಲಾವಿದರು ನಟಿಸಿದ್ದಾರೆ.

