ರಿಷಭ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ ನ ಟ್ರೇಲರ್ ಭರ್ಜರಿ ಹಿಟ್ ಆಗಿದೆ. ಬಿಡುಗಡೆ ಆದ ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡು, ಟ್ರೆಂಡಿಂಗ್ ನಲ್ಲಿದೆ.
ಇತ್ತೀಚೆಗೆ ಸಿನಿಮಾದ ʼಸಿಂಗಾರ ಸಿರಿಯೆʼ ಮೂಲಕ ಮನ ಗೆದ್ದಿದ್ದ ಚಿತ್ರ ತಂಡ ಈಗ ಅದ್ಭುತ ದೃಶಗಳ್ಳುವುಳ್ಳ ಟ್ರೇಲರ್ ಮೂಲಕ ಸದ್ದು ಮಾಡಿದೆ.
ಕರಾವಳಿಯ ಕಂಬಳ ಕ್ರೀಡೆ,ಆಚರಣೆ – ಆಚಾರ – ವಿಚಾರಗಳನ್ನು ಟ್ರೇಲರ್ ನಲ್ಲಿ ಒಂದು ಎಳೆಯಾಗಿ ತೋರಿಸಲಾಗಿದೆ.


ಫಾರೆಸ್ಟ್ ಆಫೀಸರ್ ಲುಕ್ ನಲ್ಲಿ ಕಿಶೋರ್ ಹಾಗೂ ಊರಿನ ಸಂಪ್ರದಾಯವನ್ನು ಉಳಿಸುವ ಪಾತ್ರದಲ್ಲಿ ರಿಷಭ್ ಕಾಣಿಸಿಕೊಂಡಿದ್ದಾರೆ.
ತುಳುನಾಡಿನ ಸಂಸ್ಕೃತಿಯ ಹಿನ್ನೆಲೆಯನ್ನಿಟ್ಟುಕೊಂಡು ‘ಕಾಂತಾರ’ವನ್ನು ಹೇಳಲು ಹೊರಟಿದ್ದಾರೆ ರಿಷಭ್ ಶೆಟ್ಟಿ.
ದೃಶ್ಯಗಳು ಗಮನ ಸೆಳೆಯುವುದರ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಕುತೂಹಲ ಹುಟ್ಟುವುದರ ಹಿಂದೆ ಅಜನೀಶ್ ಲೋಕನಾಥ್ ಅವರ ಕೈಚಳಕ ಎದ್ದು ಕಾಣುತ್ತದೆ.
ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಇದೇ ಸೆ.30 ರಂದು ಸಿನಿಮಾ ತೆರೆಗೆ ಬರಲಿದೆ.

