ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ ದೊಡ್ಡ ಹಿಟ್ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ರಿಷಬ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾಕ್ಕೆ ಮತ್ತೊಂದು ಸಂತಸದ ಗರಿ ಸಿಕ್ಕಿದೆ.
ʼಕಾಂತಾರಾʼ ರಿಲೀಸ್ ಆಗಿ ಸೂಪರ್ ಹಿಟ್ ಥಿಯೇಟರ್ ನಲ್ಲಿ ರನ್ನಿಂಗ್ ಇರುವಾಗ ನೆಟ್ಟಿಗರು ಸಿನಿಮಾಕ್ಕೆ ಆಸ್ಕರ್ ಸಿಗಬೇಕೆಂದು ಟ್ವೀಟ್ ಮಾಡಿ ಆಗ್ರಹಿಸಿದ್ದರು. ಹೊಂಬಾಳೆ ಫಿಲ್ಮ್ಮ್ಸ್ ನ ನಿರ್ಮಾಪಕ ವಿಜಯ್ ಕಿರಂಗದೂರು ಪ್ರೇಕ್ಷಕರ ಮಾತನ್ನು ಪರಿಗಣಿಸಿ ಆಸ್ಕರ್ ಪ್ರಶಸ್ತಿಗಾಗಿ ಚಿತ್ರವನ್ನು ಪರಿಗಣಿಸಲು ಅರ್ಜಿ ಸಲ್ಲಿಸಿದ್ದರು.
ಇದೀಗ ಆಸ್ಕರ್ ಗೆ ಸಿನಿಮಾ ಅರ್ಹತೆ ಪಡೆದುಕೊಂಡಿದೆ ಎಂದು ಹೊಂಬಾಳೆ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ‘ಕಾಂತಾರ’ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದಿದೆ.
ಉತ್ತಮ ನಟ, ಉತ್ತಮ ಚಿತ್ರ ಎರಡೂ ವಿಭಾಗದಲ್ಲಿ 301 ಚಿತ್ರಗಳೊಂದಿಗೆ ʼಕಾಂತಾರʼ ಸ್ಪರ್ಧಿಸಲಿದೆ. 2023 ರ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜ. 24ರಂದು ಘೋಷಣೆಯಾಗಲಿದೆ.



