ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ ದೊಡ್ಡ ಹಿಟ್ ನೀಡಿದ ಸಿನಿಮಾದಲ್ಲಿ ‘ಕಾಂತಾರ’ ಸಿನಿಮಾವೂ ಒಂದು.16 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ 400 ಕೋಟಿಗೂ ಅಧಿಕ ಕಮಾಯಿ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿತ್ತು.
ಕನ್ನಡದಲ್ಲಿ ತೆರೆಕಂಡ ಕಂಡು ಇತರ ಭಾಷೆಗೆ ಡಬ್ ಅಲ್ಲಿಯೂ ಭರ್ಜರಿ ಕಲೆಕ್ಷನ್ ಗಿಟ್ಟಿಸಿಕೊಂಡ ಚಿತ್ರ ಇಂದು (ಜ.7 ರಂದು) ನೂರು ದಿನಗಳನ್ನು ಪೂರೈಸಿದೆ. ಓಟಿಟಿಯಲ್ಲಿ ರಿಲೀಸ್ ಆಗಿಯೂ ಸಿನಿಮಾ ಥಿಯೇಟರ್ ನಲ್ಲಿ ಇನ್ನೂ ಓಡುತ್ತಿದೆ.
ಬೆಂಗಳೂರಿನ ಏಳು ಪಿವಿಆರ್ ಸೇರಿದಂತೆ ರಾಜ್ಯದ ಬರೋಬ್ಬರಿ 37 ಚಿತ್ರಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿದೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ. ಇನ್ನು 170 ಚಿತ್ರಮಂದಿರಗಳಲ್ಲಿ ಕಾಂತಾರ 75 ದಿನಗಳನ್ನು ಪೂರೈಸಿತ್ತು ಎಂದೂ ಸಹ ತಿಳಿಸಲಾಗಿದೆ.
ಸೆ.30 ರಂದು ರಿಲೀಸ್ ಆದ ಸಿನಿಕಾ ಇತರ ಭಾಷೆಯ ಸಿನಿಮಾಗಳಿಗೆ ಸದ್ದು ನೀಡಿ ಗೆದ್ದು ನಿಂತಿತ್ತು. ಸಿನಿಮಾ ರಿಲೀಸ್ ಆಗಿ 100 ದಿನಗಳು ಕಳೆದಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
‘ಬೆಳಕು.. ಆದರೆ ಇದು ಬೆಳಕಲ್ಲ ನೂರು ದಿನದ ದರ್ಶನ’ ಎಂದು ಬರೆದು ಸಂತಸವನಯ ಹಂಚಿಕೊಂಡಿದೆ.
ಇದೆಲ್ಲದರ ನಡುವೆ ‘ಕಾಂತಾರ-2’ ಸಿನಿಮಾ ತೆರೆಗೆ ಬರಲಿದೆ ಎನ್ನುವ ಗುಸು ಗುಸು ಗಾಸಿಪ್ ಆಗಿ ಹರಿದಾಡುತ್ತಿದೆ.

