ರಿಷಬ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಸಿನಿಮಾಕ್ಕೆ ದೊಡ್ಡ ಹಿಟ್ ಸಿಕ್ಕಿದೆ.
ಈಗಾಗಲೇ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿರುವ ʼಕಾಂತಾರʼ ವಿಶ್ವದ ಶ್ರೇಷ್ಠ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗವುದರ ಬಗ್ಗೆ ಸುದ್ದಿಯೊಂದು ಹೊರ ಬಿದ್ದಿದೆ.
ಖಾಸಗಿ ಚಾನೆಲ್ ವೊಂದರಲ್ಲಿ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಂಗದೂರು ಅವರು ʼಕಾಂತಾರʼ ವನ್ನು ಆಸ್ಕರ್ ಗೆ ಆಯ್ಕೆ ಮಾಡುವ ಕುರಿತು ಮಾತಾನಾಡಿದ್ದಾರೆ. ಆಸ್ಕರ್ ರೇಸ್ನಲ್ಲಿ ಸ್ಪರ್ಧೆ ಮಾಡಲು ನಾವು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಅಂತಿಮ ನಾಮನಿರ್ದೇಶನ ಪಟ್ಟಿ ಇನ್ನಷ್ಟೇ ಬರಬೇಕಿದೆ ಎಂದು ಹೇಳಿದ್ದಾರೆ.
ಈ ಮಾತು ವೈರಲ್ ಆಗಿದ್ದು, ಭಾರತದಲ್ಲಿ ಎಲ್ಲರ ಮನಗೆದ್ದ ʼಕಾಂತಾರʼ ಆಸ್ಕರ್ ಅಂಗಳದಲ್ಲಿ ಮಿಂಚಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಇದೇ ಸಂದರ್ಶನದಲ್ಲಿ ನಿರ್ಮಾಪಕರು ರಿಷಬ್ ಅವರು ಇತರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಫ್ರಿಯಾದ ಬಳಿಕ ಇದರ ಮುಂದುವರೆದ ಭಾಗ ಮಾಡಬೇಕೋ ಬೇಡ್ವೋ ಎನ್ನುವುದನ್ನು ಚರ್ಚಿಸುತ್ತೇವೆ ಎಂದಿದ್ದಾರೆ.

