ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾದ ಯಶಸ್ಸು ಭಾರತದ ಚಿತ್ರರಂಗವನ್ನು ಬೆರಗುಗೊಳಿಸಿದ್ದು ಗೊತ್ತೇ ಇದೆ.
ಸೂಪರ್ ಸ್ಟಾರ್ ರಜನಿಕಾಂತ್ ನಂತಹ ದಿಗ್ಗಜ ನಟ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಐದು ಭಾಷೆಯಲ್ಲೂ ಕಮಾಲ್ ಮಾಡಿತ್ತು. ಕನ್ನಡದಲ್ಲಿ ಮೊದಲಿಗೆ ತಯಾರಾಗಿ ನಂತರ ಇತರ ಭಾಷೆಗೆ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನು ಸೆಳೆದು ಬಾಕ್ಸ್ ಆಫೀಸ್ ನಲ್ಲಿ/400 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಕಾಂತಾರದ ಹವಾ ಇನ್ನೂ ಕಮ್ಮಿಯಾಗಿಲ್ಲ ಈ ವರ್ಷದ ದೊಡ್ಡ ಹಿಟ್ ಆಗಿ ಸಿನಿಮಾ ಮೂಡಿ ಬಂದಿದೆ. ಗೂಗಲ್ ನಲ್ಲಿ ಹೆಚ್ಚು ಹುಡುಕಿದ ಸಿನಿಮಾಗಳಲ್ಲಿ ಕಾಂತಾರವೂ ಸೇರಿದೆ.
ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸಂದರ್ಶನವೊಂದರಲ್ಲಿ ಮಾತಾನಾಡುತ್ತಾ, ‘ ಕಾಂತಾರ ದಂತಹ ಸಣ್ಣ ಬಜೆಟ್ ಸಿನಿಮಾವೂ ಹೇಗೆ ಅಧಿಕ ಕಲೆಕ್ಷನ್ ಮಾಡುತ್ತದೆ ಎಂದು ಹೇಳಿದ್ದಾರೆ.
ದೊಡ್ಡ ಬಜೆಟ್ನ ಸಿನಿಮಾಗಳು ಒಂದು ರೀತಿ ಇವೆ. ತಕ್ಷಣ ಕಾಂತಾರ ರೀತಿಯ ಚಿತ್ರ ಬರುತ್ತದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ನೋಡಿ. ದೊಡ್ಡ ಕಲೆಕ್ಷನ್ ಮಾಡಲು ದೊಡ್ಡ ಬಜೆಟ್ ಬೇಕಿಲ್ಲ. ಕಾಂತಾರ ರೀತಿಯ ಸಣ್ಣ ಬಜೆಟ್ ಚಿತ್ರ ಕೂಡ ಆ ಸಾಧನೆ ಮಾಡಬಹುದು. ವೀಕ್ಷಕರಾಗಿ ನೋಡಿದಾಗ ಕಾಂತಾರ ಚಿತ್ರ ಎಕ್ಟೈಟ್ ಎನಿಸುತ್ತದೆ. ಆದರೆ ಸಿನಿಮಾದವರಾಗಿ ನೋಡಿದಾಗ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ’ ಎಂದು ರಾಜಮೌಳಿ ಹೇಳಿದ್ದಾರೆ.
ಕಾಂತಾರ ಸಣ್ಣ ಬಜೆಟ್ ನಲ್ಲಿ ತಯಾರಾಗಿ ದೊಡ್ಡ ಹಿಟ್ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯೂ ಹೌದು.

