

ಪ್ರಮೋದ್ ಮರವಂತೆ ಬರೆದಿರುವ ಸಾಹಿತ್ಯದಲ್ಲಿ
ಕರಾವಳಿಯ ಮೀನು, ಭಾಷೆ, ಸಂಸ್ಕೃತಿಯನ್ನು ಅದ್ಭುತವಾಗಿ ತೋರಿಸಲಾಗಿದೆ. ಒಂದೇ ದಿನದಲ್ಲಿ 1.6 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ.
ರಿಷಭ್ ನಿರ್ದೇಶನ ಹಾಗೂ ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಕಂಬಳ ಹಿನ್ನೆಲೆಯ ಕಥೆಯ ಚಿತ್ರ ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ.
ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಮೊದಲ ಹಾಡು ‘ಸಿಂಗಾರ ಸಿರಿಯೇ’ ಕೇಳುಗರನ್ನು ಮೋಡಿ ಮಾಡುತ್ತಿದೆ.
ಸ್ವಾತಂತ್ರ್ಯ ದಿನದ ಪ್ರಯುಕ್ತ ಬಿಡುಗಡೆಯಾದ ಹಾಡು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ಕರಾವಳಿ ಚಿತ್ರಣದ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಹಾಡಿನಲ್ಲಿ ರಿಷಭ್ ಶೆಟ್ಟಿ ಹಾಗೂ ಸಪ್ತಮಿ ಗೌಡ ರೊಮ್ಯಾಂಟಿಕ್ ಕೆಮೆಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ. ವಿಜಯ್ ಪ್ರಕಾಶ್, ಅನನ್ಯ ಭಟ್ ಪನ್ನಾರ್ ವಲ್ಟುರ್ ಹಾಡು ಕೇಳುಗರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹಾಡಿನಲ್ಲೇ ಲೀನವಾಗುವಂತೆ ಮಾಡುತ್ತದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ.

