ರಿಷಬ್ ಶೆಟ್ಟಿ ನಿರ್ದೇಶನದ ʼಕಾಂತಾರʼ ದೊಡ್ಡ ಮಟ್ಟದಲ್ಲಿ ಹಿಟ್ ಆಗದೆ. ಗ್ಲೋಬಲ್ ಲೆವೆಲ್ ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ.
ಈಗಾಗಲೇ ಹಲವು ದಾಖಲೆಗಳನ್ನು ಮುರಿದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರʼ ಈಗ ಮತ್ತೊಂದು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಸೆ.30 ರಂದು ತೆರೆ ಕಂಡ ಚಿತ್ರ ಇದುವರೆಗೆ ಸಿನಿಮಾಕ್ಕೆ ಕನ್ನಡ ಮಾತ್ರವಲ್ಲದೆ ಇತರ ಭಾಷೆಯ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಹಿಂದಿ, ತಮಿಳು,ತೆಲುಗು, ಮಲಯಾಳಂನಲ್ಲಿ ಡಬ್ ಆಗಿಯೂ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಿದೆ.
ʼಕಾಂತಾರʼ ವರ್ಲ್ಡ್ ವೈಡ್ 400 ಕೋಟಿ ಕಲೆಕ್ಷನ್ ಮಾಡಿದೆ. ಕರ್ನಾಟದಲ್ಲೇ 168.5 ಕೋಟಿ.ರೂ ಗಳಿಕೆ ಮಾಡಿದೆ. ಕೇರಳದಲ್ಲಿ 19.2 ಕೋಟಿ ರೂ., ಉತ್ತರ ಭಾರತದಲ್ಲಿ 96 ಕೋಟಿ ರೂ., ಆಂಧ್ರ/ತೆಲಂಗಾಣದಲ್ಲಿ 60 ಕೋಟಿ ರೂ., ತಮಿಳುನಾಡಿನಲ್ಲಿ 12.70 ಕೋಟಿ.ರೂ ಕಲೆಕ್ಷನ್ ಮಾಡಿದೆ. ಓವರ್ ಸೀಸ್ ಮಾರುಕಟ್ಟೆಯು ಅಂದಾಜು 44 ಕೋಟಿ ರೂ. ಕಲೆಕ್ಷನ್ ಮಾಡಿದೆ ತಿಳಿಸಿದೆ.

