HomeExclusive Newsಮೊದಲ ಬಾರಿಗೆ ಅಂತಾರಾಷ್ಟ್ರೀಯ ಮ್ಯಾಗ್ ಜಿನ್ ಮುಖಪುಟದಲ್ಲಿ ಕನ್ನಡ ಚಿತ್ರ: 'ಕಾಂತಾರ' ಕ್ಕೆ ಸಂದ ಗೌರವ

ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮ್ಯಾಗ್ ಜಿನ್ ಮುಖಪುಟದಲ್ಲಿ ಕನ್ನಡ ಚಿತ್ರ: ‘ಕಾಂತಾರ’ ಕ್ಕೆ ಸಂದ ಗೌರವ

‘ಕಾಂತಾರ’ ಕನ್ನಡದ ಹೆಮ್ಮೆ. ಕನ್ನಡ ಚಿತ್ರರಂಗದತ್ತ ಎಲ್ಲಾ ಭಾಷಿಗರು ತಿರುಗಿ ನೋಡುವಂತೆ ಮಾಡಿದ ಕನ್ನಡದ‌ ಮತ್ತೊಂದು ‌ಸಿನಿಮಾ. ಕೆಜಿಎಫ್ 1,2, ‘777 ಚಾರ್ಲಿ’, ‘ವಿಕ್ರಾಂತ್ ರೋಣ’ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಹೆಚ್ಚಾಗಿದೆ.


ಕನ್ನಡವನ್ನೇ ಪ್ರಧಾನವಾಗಿ ಇಟ್ಟುಕೊಂಡು ಇತರ ಭಾಷೆಯಲ್ಲಿ ಡಬ್ ಆಗಿ ಬಂದಿರುವ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಹವಾ ಜೋರಾಗಿ ಬೀಸುತ್ತಿದೆ. ಅಂದಾಜು 350 ಕೋಟಿಗೂ ಅಧಿಕ ಕಮಾಯಿಯನ್ನು ಮಾಡಿರುವ ಸಿನಿಮಾ ಓಟಿಟಿಯಲ್ಲಿ ಬರಲು ಸಿದ್ದವಾಗಿದೆ. ಇದೇ ತಿಂಗಳಿನಲ್ಲಿ ಓಟಿಟಿಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.



ಈಗಾಗಲೇ ಹಲವು ಖ್ಯಾತನಾಮ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿರುವ ‘ಕಾಂತಾರ’ ಸಿನಿಮಾ ಮತ್ತೊಂದು ಗರಿ ಸಿಕ್ಕಿದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯಾಗಜಿನ್ ಆದ ‘ಫ್ರಂಟ್ ಲೈನ್’ ನಲ್ಲಿ ‘ಕಾಂತಾರ’ ಸಿನಿಮಾದ ಪೋಸ್ಟರ್ ಮುಖಪುಟವಾಗಿ ಅಚ್ಚಾಗಿದೆ. ‘ಕಾಂತಾರ ಅದ್ಭುತ’ ಎಂದು ಮ್ಯಾಗ್ ಜಿನ್ ನಲ್ಲಿ ‌ಬರೆಯಲಾಗಿದೆ.


ವಿಶೇಷವೆಂದರೆ 1984 ರಿಂದ ಇದುವರೆಗೆ ಯಾವುದೇ ಕನ್ನಡ ಸಿನಿಮಾದ ಫೋಟೋಗಳು‌’ಫ್ರಂಟ್ ಲೈನ್’ ನಲ್ಲಿ ಅಚ್ಚಾಗಿಲ್ಲ. ಮೊತ್ತಮೊದಲ ಬಾರಿಗೆ ‘ಕಾಂತಾರ’ ಸಿನಿಮಾದ ಪೋಸ್ಟರ್ ವೊಂದನ್ನು ಅಂತಾರಾಷ್ಟ್ರೀಯ ಮಟ್ಟದ ಮ್ಯಾಗ್ ಜಿನ್ ಪ್ರಕಟಿಸಿದೆ.

RELATED ARTICLES

Most Popular

Share via
Copy link
Powered by Social Snap