‘ಕಾಂತಾರ’ ಚಿತ್ರದ ಯಶಸ್ಸು ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಸೆಲೆಬ್ರಿಟಿಗಳಿಂದಿಡಿದು, ರಾಜಕೀಯ ಮುಖಂಡರು ಇತರೆ ಕ್ಷೇತ್ರದ ಗಣ್ಯರು ಚಿತ್ರವನ್ನು ಪ್ರಶಂಸಿಸಿದ್ದಾರೆ.
ಕನ್ನಡದಿಂದ ಇತರೆ ಭಾಷೆಗೆ ಡಬ್ ಆದ ‘ಕಾಂತಾರ’ ಅಲ್ಲೂ ಕೂಡ ಭರ್ಜರಿ ಕಮಾಯಿ ಮಾಡುತ್ತಿದೆ. ರಿಷಬ್ ಶೆಟ್ಟಿ ಅವರು ಎಲ್ಲಾ ರಂಗದಲ್ಲೂ ಸುದ್ದಿಯಾಗಿದ್ದಾರೆ.
ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರ ತಂದೆ ಟಾಲಿವುಡ್ ನಲ್ಲಿ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದರು. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಫೇಮ್ ಎಷ್ಟು ತಂದು ಕೊಟ್ಟಿದೆ ಎಂದರೆ ಬಾಲಿವುಡ್ ನಿಂದಲೂ ಅವರಿಗೆ ಆಫರ್ ಗಳು ಬಂದಿವೆಯಂತೆ.
ಈ ಬಗ್ಗೆ ರಿಷಬ್ ಅವರೇ ಮಾತಾನಾಡಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾ ರಂಗದಿಂದ ಆಫರ್ ಬಂದಿದ್ದು ನಿಜ. ಆದರೆ, ಸದ್ಯಕ್ಕೆ ನಾನು ಎಲ್ಲಿಯೂ ಹೋಗುತ್ತಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಹಾಗಾಗಿ ಇಲ್ಲಿಯೇ ಇದ್ದುಕೊಂಡು ಸಿನಿಮಾ ಮಾಡುತ್ತೇನೆ. ಆ ಸಿನಿಮಾವನ್ನೇ ವಿವಿಧ ಸಿನಿಮಾ ರಂಗದ ಪ್ರೇಕ್ಷಕರು ನೋಡಲಿ ಎನ್ನುವುದು ನನ್ನಾಸೆ ಎಂದು ಹೇಳಿದ್ದಾರೆ.
ಅಮಿತಾಭ್ ಬಚ್ಚನ್ ಅವರನ್ನು ಆರಾಧಿಸುತ್ತೇನೆ, ನಾನು ಅವರನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ಸಲ್ಮಾನ್ ಭಾಯ್, ಯುವ ಪೀಳಿಗೆಯ ನಟರಾದ ಶಾಹಿದ್ ಕಪೂರ್ ಸೇರಿ ಅನೇಕರಲ್ಲಿ ಪ್ರತಿಯೊಂದನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

