ಆರ್ ಸಿಬಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಮಿಸ್ಟರ್ 360 ಎಬಿಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಈ ಬಾರಿ ಆಟಗಾರನಾಗಿ ಅಲ್ಲ ಹೊಸ ಜವಬ್ದಾರಿಯೊಂದಿಗೆ ತಂಡದೊಂದಿಗೆ ಅವರು ಕಾಣಿಸಿಕೊಳ್ಳಲಿದ್ದಾರೆ.
ಈ ಖುಷಿಯ ಬೆನ್ನಲ್ಲೇ ಎಬಿಡಿ ಸ್ಟಾರ್ ನಟರೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ. ಅದು ಯಾರೆಂದ್ರೆ ನಮ್ಮ ʼಕಾಂತಾರʼದ ಶಿವ ಅಂದರೆ ರಿಷಬ್ ಶೆಟ್ಟಿ ಅವರ ಜೊತೆ.
ಆರ್ ಸಿಬಿ ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ʼಕಾಂತಾರʼದ ಬಗ್ಗೆ ಕ್ರಿಕೆಟ್ ಸಂಬಂಧಿಸಿ ಪೋಸ್ಟ್ ಹಾಕಿತ್ತು. ಎಬಿ ಡಿವಿಲಿಯರ್ಸ್ ʼಕಾಂತಾರʼ ದ ನಟ- ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ.
ಒಂದಷ್ಟು ಸಮಯ ಕಳೆದ ಬಳಿಕ ಇಬ್ಬರು ಹೆಗಲ ಮೇಲೆ ಹೆಗಲಾಕಿಕೊಂಡು ʼಕಾಂತಾರʼದ ಶೈಲಿಯಲ್ಲಿ ಡೈಲಾಗ್ಸ್ ಹೇಳುವ ಹಾಗೆ ಅನುಕರಣೆ ಮಾಡಿದ್ದಾರೆ. ಈ ವಿಡಿಯೋವನ್ನು ಹೊಂಬಾಳೆ ಹಂಚಿಕೊಂಡಿದ್ದು, ಸಖತ್ ಗಮನ ಸೆಳೆದಿದೆ.
ವಿಡಯೋದಲ್ಲಿ ಕಾಂತಾರ ಸಿನಿಮಾದಲ್ಲಿನ ರಿಷಬ್ ಅಭಿನಯದ ಝಲಕ್ ಹಾಗೂ ಆರ್ ಸಿಬಿಯಲ್ಲಿ ಸಿಕ್ಸರ್ ಗಳನ್ನು ಹೊಡೆದ ಎಬಿಡಿ ಅವರ ಬ್ಯಾಟಿಂಗ್ ತುಣುಕನ್ನು ತೋರಿಸಲಾಗಿದೆ.

