HomeNews"ಕನಕ ಮಾರ್ಗ" ದ ಮೂಲಕ ಮಕ್ಕಳಿಗೆ ಸನ್ಮಾರ್ಗ ತೋರಿಸುತ್ತಿದ್ದಾರೆ ವಿಶಾಲ್ ರಾಜ್

“ಕನಕ ಮಾರ್ಗ” ದ ಮೂಲಕ ಮಕ್ಕಳಿಗೆ ಸನ್ಮಾರ್ಗ ತೋರಿಸುತ್ತಿದ್ದಾರೆ ವಿಶಾಲ್ ರಾಜ್

ಕೆಂಪೇಗೌಡ ಪಾಟಿಲ್ ನಿರ್ಮಾಣದ, ವಿಶಾಲ್ ರಾಜ್ ನಿರ್ದೇಶನದ, ಹೊರಪೇಟೆ ಮಲೇಶಪ್ಪ ಅವರ “ಕನಕನ ಹೆಜ್ಜೆ” ಕಾದಂಬರಿ ಆಧಾರಿತ “ಕನಕ ಮಾರ್ಗ” ಚಿತ್ರದ ಪತ್ರಿಕಾಗೋಷ್ಠಿ ಹಾಗೂ ಪ್ರದರ್ಶನ ಇತ್ತೀಚಿಗೆ ನಡೆಯಿತು. ಕಾಗಿನೆಲೆ ಗುರುಪೀಠದ ಶ್ರೀನಿರಂಜನಾನಂದ ಪುರಿ ಸ್ವಾಮಿಗಳು ಸೇರಿದಂತೆ ಅನೇಕ ಸ್ವಾಮಿಗಳು ಹಾಗೂ ರಾಜಕೀಯ ಮುಖಂಡರಾದ ಹೆಚ್ ಎಂ ರೇವಣ್ಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕರ್ನಾಟಕ ದಾಸರ, ಶರಣರ ನೆಲೆವೀಡು. ಕನಕದಾಸರು ದಾಸಶ್ರೇಷ್ಠರು. ತಮ್ಮ ಸಾಹಿತ್ಯದ ಮೂಲಕ ಜ್ಞಾನ ದೀವಿಗೆ ಬೆಳಗಿದವರು. ಅಂತಹ ದಾಸಶ್ರೇಷ್ಠರ ಜೀವ‌ನವನ್ನು ಆದರ್ಶವಾಗಿ ತೆಗೆದುಕೊಂಡಾಗ ನಾವು ಸನ್ಮಾರ್ಗದಲ್ಲಿ ಸಾಗಬಹುದು. ಅದರಲ್ಲೂ ಈಗಿನ ಮಕ್ಕಳು ಕನಕದಾಸರೆ ಮೊದಲಾದ ದಾರ್ಶನಿಕರ ಬಗ್ಗೆ ತಿಳಿದುಕೊಳ್ಳಬೇಕು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ. ಹೊರಪೇಟೆ ಮಲೇಶಪ್ಪ ಅವರ ಕಾದಂಬರಿ ನನಗೆ ಚಿತ್ರ ಮಾಡಲು‌ ಸ್ಪೂರ್ತಿಯಾಯಿತು.
ಕಾಗಿನೆಲೆ, ಬಾಡ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಸುಚೇಂದ್ರ ಪ್ರಸಾದ್, ಮಾಸ್ಟರ್ ಸ್ಕಂದ, ಗಿರೀಶ್ ಜತ್ತಿ, ಮಾಸ್ಟರ್ ವಿಶ್ವ, ಬೇಬಿ‌ ಸಾನ್ವಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಾಗಿನೆಲೆ ಶ್ರೀಗಳು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.

ಚಿತ್ರದಲ್ಲಿ ನಟಿಸಿರುವ ಮಾಸ್ಟರ್ ಸ್ಕಂದ, ಬೇಬಿ ಸಾನ್ವಿ ಹಾಗೂ ನಿರ್ಮಾಪಕ ಕೆಂಪೇಗೌಡ ಪಾಟೀಲ್ ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

RELATED ARTICLES

Most Popular

Share via
Copy link
Powered by Social Snap