ಗೌತಮ್ ವಿಮಲ್ ಅವರ ‘ಕೈಮರ’ ಚಿತ್ರ ತಂಡ ಪ್ರಿಯಾಂಕ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿ ಶುಭಾಶಯವನ್ನು ಕೋರಿದೆ.
ಪ್ರಿಯಾಂಕ ಉಪೇಂದ್ರ ಅವರು ವಿಭಿನ್ನ ಲುಕ್ ನಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ನಟಿ ಛಾಯಸಿಂಗ್ ಅವರು ಕೂಡ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಇದೊಂದು ಹಾರಾರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ.
ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ “ಕೈಮರ” ದಲ್ಲಿರಲಿದೆ.
ಪ್ರಿಯಾಂಕ ಉಪೇಂದ್ರ , ಪ್ರಿಯಾಮಣಿ, ಛಾಯಾಸಿಂಗ್ ವಿನಯ್ ಗೌಡ, ನಿರ್ಮಾಪಕ ವಿ. ಮತ್ತಿಯಳಗನ್ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

