ಸ್ಯಾಂಡಲ್ ವುಡ್ ಸದ್ದಿಲ್ಲದೆ ಹಲವು ಸಿನಿಮಾಗಳು ಸಟ್ಟೇರುತ್ತವೆ. ಇಂಥ ಸಿನಿಮಾಗಳ ಪೈಕಿ ರಾಮ್ ಪ್ರಸನ್ನ ಹುಣಸೂರು ಅವರ ‘ಕಡಲೂರ ಕಣ್ಮಣಿ’ ಚಿತ್ರವೂ ಒಂದು.
‘ಕಿಸ್ ‘ಖ್ಯಾತಿಯ ಯುವನಟ ವಿರಾಟ್ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಆರ್.ಪಿ ಸಂಗೀತ ನೀಡರುವ ಹಾಡುಗಳು ಕೂಡ ರಿಲೀಸ್ ಆದವು. ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಚಿತ್ರದಲ್ಲಿ ನಾಯಕನಾಗಿ ಅರ್ಜುನ್ ನಗರ್ಕರ್ ಕಾಣಿಸಿಕೊಳ್ಳಲಿದ್ದು, ಹೊಸ ಪರಿಚಯವಾಗಿ ಅಂಜು ಮೊದಲ ಬಾರಿ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ದಸರಾಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ ಎನ್ನುತ್ತಾರೆ ನಿರ್ದೇಶಕ ಪ್ರಸನ್ನ. ವಿನೋದ್ ರಾಮ್, ಶೈಲೇಶ್ ಆರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಟೀಸರ್ ಬಿಡುಗಡೆ ಸಮಾರಂಭಕ್ಕೆ ವಿರಾಟ್ ಹಾಗೂ ಬಹುಭಾಷಾ ನಟಿ ನೇಹಾ ಸಕ್ಸೇನಾ ಭಾಗಿಯಾಗಿದ್ದರು.

