HomeNews'ಮಧುರ ಮಧುರ' ಹಾಡು ಮೂಲಕ ಸದ್ದು ಮಾಡುತ್ತಿದೆ 'ಕಡಲ ತೀರದ ಭಾರ್ಗವ'

‘ಮಧುರ ಮಧುರ’ ಹಾಡು ಮೂಲಕ ಸದ್ದು ಮಾಡುತ್ತಿದೆ ‘ಕಡಲ ತೀರದ ಭಾರ್ಗವ’

“ಕಡಲ ತೀರದ ಭಾರ್ಗವ” ಹೀಗೊಂದು ಚಿತ್ರ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ.

ಇತ್ತೀಚೆಗೆ ಸಿನಿಮಾದ ‘ಮಧುರ ಮಧುರ’ ಹಾಡು ರಿಲೀಸ್ ಆಗಿದ್ದು, ಸಖತ್ ಗಮನ ಸೆಳೆಯುತ್ತಿದೆ.

ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸಿರುವ, ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರದ ” ಮಧುರ ಮಧುರ” ಹಾಡು ಇತ್ತೀಚೆಗೆ ARC MUSIC ಮೂಲಕ

ಬಿಡುಗಡೆಯಾಗಿದೆ. ಅನಿಲ್ ಸಿ ಜೆ ಸಂಗೀತ ನೀಡಿರುವ ಈ ಹಾಡನ್ನು ವಾರಿಜಾಶ್ರೀ ಹಾಗೂ ಅನಿಲ್ ಸಿ ಜೆ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡು ಜನಪ್ರಿಯವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
ಆರ್ಯನ್ ರೋಷನ್ ನೃತ್ಯ ನಿರ್ದೇಶಿಸಿರುವ “ಮಧುರ ಮಧುರ” ಹಾಡಿಗೆ‌ ನಾಯಕ ಭರತ್ ಗೌಡ ಹಾಗೂ ನಾಯಕಿ ಶೃತಿ ಪ್ರಕಾಶ್ ಹೆಜ್ಜೆ ಹಾಕಿದ್ದಾರೆ. ಅನಿಲ್ ಸಿ ಜೆ ಸಂಗೀತಕ್ಕೆ ಹಾಗೂ ಕೀರ್ತನ ಪೂಜಾರಿ ಅವರ ಛಾಯಾಗ್ರಹಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಬರಲಿದ್ದು, ಟ್ರೇಲರ್ ನಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap