‘ಕಡಲ ತೀರದ ಭಾರ್ಗವ’ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗುವುದು ಹೆಸರಾಂತ ಸಾಹಿತಿ ಡಾ| ಶಿವರಾಮ ಕಾರಂತರು. ಕನ್ನಡಿಗರ ಪ್ರೀತಿಪಾತ್ರರಾದ ಕಾರಂತರು ‘ಕಡಲ ತೀರದ ಭಾರ್ಗವ’ ಎಂಬ ಬಿರುದು ಪಡೆದವರು. ಸದ್ಯ ಅದೇ ಹೆಸರಿನಲ್ಲಿ ಹೊಸ ಕನ್ನಡ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಈ ಚಿತ್ರಕ್ಕೂ ಶಿವರಾಮ ಕಾರಂತರಿಗೂ ಯಾವುದೇ ರೀತಿಯ ಸಂಭಂದವಿಲ್ಲವಂತೆ. ಹೀಗೇನ್ನುತ್ತಾರೆ ಚಿತ್ರದ ನಿರ್ದೇಶಕರು. ಇದೆ ಮಾರ್ಚ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಬಗ್ಗೆ ನಿರ್ದೇಶಕರು ಹಾಗು ನಾಯಕರು ಮಾತನಾಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಾಗು ಟ್ರೈಲರ್ ಗಳಿಂದ ಎಲ್ಲೆಡೆ ಪರಿಚಿತವಾಗಿರುವ, ಉತ್ತಮ ಮಾತುಗಳನ್ನು ಪಡೆಯುತ್ತಿರುವ ‘ಕಡಲ ತೀರದ ಭಾರ್ಗವ’ ಸಿನಿಮಾ ಸಂಪೂರ್ಣ ಹೊಸಬರ ತಂಡದ ಸಿನಿಮ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗು ನಿರ್ದೇಶನ ಎಲ್ಲವೂ ಯುವಪ್ರತಿಭೆ ಪನ್ನಗ ಸೋಮಶೇಖರ್ ಅವರದ್ದೇ. ಈ ಬಗ್ಗೆ ಮಾತನಾಡುವ ಅವರು, “ಕಡಲು ಎಂದರೆ ಅಗಾಧವಾದದ್ದಕ್ಕೆ ಹೋಲಿಸಬಹುದು. ಇನ್ನು ಭಾರ್ಗವ ಎಂಬುದು ಪರಶುರಾಮರಿಗಿರುವ ಇನ್ನೊಂದು ಹೆಸರು. ಈ ಎರಡೂ ಅಂಶಗಳನ್ನೂ ಇಟ್ಟುಕೊಂಡೆ ನಮ್ಮ ಚಿತ್ರಕ್ಕೆ ಈ ಶೀರ್ಷಿಕೆ ಇಡಲಾಗಿದೆಯೇ ಹೊರತು, ಇದಕ್ಕೂ ಶಿವರಾಮ ಕಾರಂತರಿಗೂ ಯಾವುದೇ ರೀತಿಯ ಹೋಲಿಕೆಯಾಗಲಿ, ಸಂಭಂದವಾಗಲಿ, ಅಥವಾ ಈ ಸಿನಿಮಾದಿಂದ ಅವರಿಗೆ, ಅವರ ಹೆಸರಿಗೆ ಯಾವುದೇ ರೀತಿಯ ಧಕ್ಕೆಯಾಗಲಿ ಉಂಟಾಗುವುದಿಲ್ಲ. ನಮ್ಮ ಚಿತ್ರದ ಕಥಾವಸ್ತುವಿನ ಒಂದು ಪ್ರಮುಖ ಅಂಶವನ್ನು ಕಡಲಿಗೆ ಹೋಲಿಸಿದ್ದೇವೆ, ಇನ್ನು ಏನೇ ಆದರೂ ಗುರಿ ಮುಟ್ಟಿಯೇ ತೀರುತ್ತೇನೆ ಎಂಬ ಗುಣ ಇರುವ ನಾಯಕ ಇರುವುದರಿಂದ ಪರಶುರಾಮನಿಗೆ ಇದನ್ನು ಹೋಲಿಸಲಾಗಿದೆ. ಈಗಾಗಲೇ ಹಲವರಿಗೆ ನಮ್ಮ ಸಿನಿಮಾವನ್ನ ತೋರಿಸಿದ್ದೇವೆ. ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರಲ್ಲದೆ, ಶೀರ್ಷಿಕೆಗೆ ತಕ್ಕ ನ್ಯಾಯವನ್ನು ಒದಗಿಸಿದ್ದೀರಿ ಎಂಬ ಅಭಿಪ್ರಾಯ ಕೂಡ ತಿಳಿಸಿದ್ದಾರೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ನಿರ್ದೇಶಕ ಪನ್ನಗ ಸೋಮಶೇಖರ್ ಅವರು.


“ಪ್ರತಿಯೊಬ್ಬ ಮನುಷ್ಯನಲ್ಲೂ ಎಲ್ಲಾ ರೀತಿಯ ಭಾವನೆಗಳು ಇರುತ್ತವೆ. ಇಂತಹ ಎಲ್ಲಾ, ಎಲ್ಲರ ಎಮೋಷನ್ ಗಳನ್ನ ಕೂಡಿಟ್ಟು ಮಾಡಿರುವ ಕಥೆಯೇ ‘ಕಡಲ ತೀರದ ಭಾರ್ಗವ’. ಚಿತ್ರದ ಟ್ರೈಲರ್ ಗೆ ಉತ್ತಮ ಪ್ರಶಂಸೆ ಕೇಳಿಬರುತ್ತಿದೆ ಟ್ರೈಲರ್ ನೋಡಿರುವವರು ತುಂಬಾ ಹಿಡಿದಿಡುತ್ತದೆ, ಕಥೆ ಏನು ಎಂದೇ ತಿಳಿಯುತ್ತಿಲ್ಲ, ಹೊಸಬರ ಸಿನಿಮಾ ಎಂದೇನಿಸುವುದಿಲ್ಲ ಎನ್ನುತ್ತಿದ್ದಾರೆ. ಮುಂದೆ ಸಿನಿಮಾ ಬಿಡುಗಡೆಯಾದ ಮೇಲೆ ಪ್ರೇಕ್ಷಕರಿಂದಲೂ ಇದೆ ರೀತಿಯ ಅಭಿಪ್ರಾಯ ಬಂದರೆ ನಮ್ಮ ಶ್ರಮ ಸಾರ್ಥಕ ಎನ್ನುತ್ತಾರೆ” ಸಿನಿಮಾದ ನಾಯಕರು ಹಾಗು ನಿರ್ಮಾಪಕರಲ್ಲೊಬ್ಬರಾದ ವರುಣ್ ರಾಜು ಅವರು.
ಒಟ್ಟಿನಲ್ಲಿ ‘ಕಡಲ ತೀರದ ಭಾರ್ಗವ’ ಇದೆ ಮಾರ್ಚ್ 3ರಂದು ಬೆಳ್ಳಿತೆರೆ ಇರುವುದು ಖಚಿತವಾಗಿದೆ. ಇದೆ ಶುಕ್ರವಾರ ರಾಜ್ಯದಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ. ಇದೊಂದು ಸೈಕಲಾಜಿಕಲ್ ಥ್ರಿಲರ್ ರೀತಿಯ ಕಥೆ ಆಗಿರಲಿದೆ. ವಿಶೇಷವೆಂದರೆ ‘ಕಡಲ ತೀರದ ಭಾರ್ಗವ’ ಸಿನಿಮಾದ ಮೊದಲ ಟಿಕೆಟ್ ಅನ್ನು ಬೃಹತ್ ಮೊತ್ತವಾದ ಸುಮಾರು ಎರಡೂವರೆ ಲಕ್ಷ ನೀಡಿ ಕೊಂಡುಕೊಳ್ಳಲಾಗಿದೆ. ನಾಯಕ ವರುಣ್ ರಾಜು ಅವರ ಸಂಭಂದಿಯಾದ ಮೋಹನ್ ರಾಜು ಅವರು ಮೊದಲ ಟಿಕೆಟ್ ಕೊಂಡುಕೊಂಡವರು.
ಈ ಸಿನಿಮಾತಂಡ ಹೊಸ ಯುವಪ್ರತಿಭೆಗಳಿಂದ ಕೂಡಿದೆ. ನಿರ್ದೇಶಕ ಪನ್ನಗ ಸೋಮಶೇಖರ್ ಅವರಾದರೆ, ‘ಎವ ಕಲಾ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಾಯಕ ವರುಣ್ ರಾಜು ಹಾಗು ಭರತ್ ಗೌಡ ಅವರು ಸೇರಿ ನಿರ್ಮಿಸಿದ್ದಾರೆ. ಅನಿಲ್ ಸಿ ಜೆ ಅವರ ಸಂಗೀತ ಹಾಗು ಕೀರ್ತನ್ ಪೂಜಾರಿ ಅವರ ಛಾಯಾಗ್ರಾಹಣವನ್ನ ಚಿತ್ರದಲ್ಲಿ ನೋಡಬಹುದಾಗಿದೆ. ವರುಣ್ ರಾಜು, ಭರತ್ ಗೌಡ, ಶೃತಿ ಪ್ರಕಾಶ್, ರಾಘವ್ ನಾಗ್, ಕೆ ಎಸ್ ಶ್ರೀಧರ್ ಮುಂತಾದವರು ಈ ಚಿತ್ರದ ಪಾತ್ರಗಳಿಗಾಗಿ ಬಣ್ಣ ಹಚ್ಚಿದ್ದಾರೆ. ಇದೆ ಮಾರ್ಚ್ 3ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.



