ಆರ್.ಚಂದ್ರು ‘ಕಬ್ಜ’ ಟೀಸರ್ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಸಂಜೆ ಪ್ಯಾನ್ ಇಂಡಿಯಾ ‘ಕಬ್ಜ’ ದ ಟೀಸರ್ ರಿಲೀಸ್ ಆಗಲಿದೆ.
ಈಗಾಗಲೇ ಸಾಕಷ್ಟು ಕಾರಣಗಳಿಂದ ನಿರೀಕ್ಷೆಯನ್ನು ಹೆಚ್ಚಿಸಿರುವ ಚಿತ್ರ ಈ ವರ್ಷದ ದೊಡ್ಡ ಸಿನಿಮಾಗಳಲ್ಲಿ ಒಂದಾಗಿ ಸೌಂಡ್ ಮಾಡುತ್ತಿದೆ. ‘ಭಾರ್ಗವ್ ಭಕ್ಷಿ’ಯಾಗಿ ಕಿಚ್ಚ ವಿಲನಗ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮುಕುಂದ ಮುರಾರಿ’ ಬಳಿಕ ಉಪ್ಪಿ – ಕಿಚ್ಚ ಎದರು ಬದುರಾಗಿ ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಪ್ರೇಕ್ಷಕರ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಟೀಸರ್ ಬಗ್ಗೆ ಹಾಗೂ ಸಿನಿಮಾ ಬಗ್ಗೆ ಕಿಚ್ಚ ಸ್ಪೆಷಲ್ ಟಾಕ್ ಕೊಟ್ಟಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿರುವ ‘ಕಬ್ಜ’ ಟೀಸರ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಕ್ಷಣಗಣನೆ ಆರಂಭವಾಗಿದೆ.
ಖ್ಯಾತ ಸ್ಟಾರ್ ಒಬ್ಬರು ಟೀಸರ್ ಬಿಡುಗಡೆ ಮಾಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
60, 70, 80ರ ದಶಕದ ಅಂಡರ್ ವರ್ಲ್ಡ್ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ಚಂದ್ರು ಹೇಳಲು ಹೊರಟಿದ್ದಾರೆ. ಇದೊಂದು ಮಲ್ಟಿಸ್ಟಾರರ್ ಸಿನಿಮಾ, ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡರೆ, ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ರವಿ ಬಸ್ರೂರು ಅವರ ಮ್ಯೂಸಿಕ್ ಮ್ಯಾಜಿಕ್ ಚಿತ್ರಕ್ಕಿದೆ. ಎರಡು ಭಾಗಗಳಲ್ಲಿ ಚಿತ್ರ ತೆರೆ ಕಾಣಲಿದೆ.

