ಸದ್ಯ ಕನ್ನಡದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿ, ಪ್ಯಾನ್ ಇಂಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಆರ್. ಚಂದ್ರು ಅವರ ‘ಕಬ್ಜ’ ಚಿತ್ರ ತಂಡ ಮತ್ತೊಂದು ಬಿಗ್ ಅಪ್ಡೇಟ್ ನೀಡಿದೆ.
ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ, ಕಾಂತಾರ ಬಳಿಕ ಬಿಗ್ ಮೂವಿಯಂದೇ ಹೇಳಲಾಗುತ್ತಿರುವ ‘ಕಬ್ಜ’ ಮಾರ್ಚ್ 17 ರಂದು ರಿಲೀಸ್ ಆಗಲಿದೆ. ಅದೇ ದಿನ ಅಪ್ಪು ಅವರ ಹುಟ್ಟು ಹಬ್ಬವೂ ಇದೆ.
ಸಿನಿಮಾದ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು, ಇದೀಗ ಆಡಿಯೋ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಸಿನಿಮಾದ ಮೊದಲ ಲಿರಿಕಲ್ ಹಾಡು ಇದೇ ಫೆ.4 ರಂದು ರಿಲೀಸ್ ಆಗಲಿದೆ ಎಂದು ಮಾಸ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರ ತಂಡ ಮಾಹಿತಿಯನ್ನು ರಿವೀಲ್ ಮಾಡಿದೆ.
ಫೆ.4 ರಂದು ಹಾಡು ರಿಲೀಸ್ ಆಗಲಿದ್ದು, ಮೂಲಗಳ ಪ್ರಕಾರ ಹೈದರಾಬಾದ್ ನಲ್ಲಿ ಹಾಡು ರಿಲೀಸ್ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಆನಂದ್ ಆಡಿಯೋದಲ್ಲಿ ಹಾಡು ರಿಲೀಸ್ ಆಗಲಿದೆ. ರವಿ ಬಸ್ರೂರು ಅವರ ಸಂಗೀತದ ಹಾಡುಗಳನ್ನು ಕೇಳಿ ಈಗಾಗಲೇ ಹುಚ್ಚೆದ್ದು ಕುಣಿದಿರುವ ಪ್ರೇಕ್ಷಕರು ‘ಕಬ್ಜ’ದಲ್ಲಿನ ರವಿ ಬಸ್ರೂರು ಸಂಗೀತದ ಹಾಡು ಕೇಳಲು ಕಾತುರತೆಯಿಂದ ಕಾಯುತ್ತಿದ್ದಾರೆ.
ಉಪೇಂದ್ರ 80ರ ಕಾಲಘಟ್ಟದ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಅವರ ಲುಕ್ ಸಹ ಅಷ್ಟೇ ವಿಶೇಷವಾಗಿದೆ. ಇನ್ನುಳಿದಂತೆ ಶ್ರೀಯಾ ಸರಣ್ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.

