ಅಂಡಲ್ ವರ್ಲ್ಡ್ ನ ರೆಟ್ರೋ ಕಥೆ ಹೇಳಲು ಹೊರಟಿರುವ ಪ್ಯಾನ್ ಇಂಡಿಯಾ ‘ಕಬ್ಜ’ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಲೇ ಇದೆ.
ಆರ್.ಚಂದ್ರು – ಉಪ್ಪಿ ಕಾಂಬಿನೇಷನ್ ‘ಕಬ್ಜ’ ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು.
ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಕದ್ದು ಕಿಚ್ಚ ಸುದೀಪ್ ಉಪೇಂದ್ರ ಜೊತೆ ಬಣ್ಣ ಹಚ್ಚಿರುವುದು ಚಿತ್ರ ಮತ್ತೊಂದು ಹೈಪ್ ಕ್ರಿಯೇಟ್ ಮಾಡುವ ಅಂಶ.
ಟೀಸರ್ ಮೂಲಕ ಧೂಳು ಎಬ್ಬಿಸಿ ಸೈಲೆಂಟ್ ಆಗಿರುವ ‘ಕಬ್ಜ’ ಇದೀಗ ದೊಡ್ಡದೊಂದು ಅಪ್ಡೇಟ್ ಕೊಡಲು ಸಿದ್ಧವಾಗಿದೆ. ಇದೇ ಜ.24 ರಂದು ಸಿನಿಮಾ ತಂಡದಿಂದ ಬಿಗ್ ಅನೌನ್ಸ್ ಮೆಂಟ್ ಹೊರ ಬೀಳಲಿದೆ. ರಿಲೀಸ್ ಡೇಟ್ ಔಟ್ ಆದರೂ ಅಚ್ಚರಿಪಡಬೇಕಿಲ್ಲ.
ಕೆಜಿಎಫ್-2, ವಿಕ್ರಾಂತ್, 777 ಚಾರ್ಲಿ ಬಳಿಕ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ‘ಕಬ್ಜ’ ಯಾವಾಗ ರಿಲೀಸ್ ಆಗಬಹುದು ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ರಿಲೀಸ್ ಡೇಟ್ ಜ.24 ರಂದೇ ಹೊರ ಬೀಳ ಬಹುದೆನ್ನುವುದು ಪ್ರೇಕ್ಷಕರ ಊಹೆ.

