HomeExclusive Newsಆರ್.ಚಂದ್ರು- ಉಪ್ಪಿ 'ಕಬ್ಜ' ಚಿತ್ರದ ಹಿಂದಿ ಟೀಸರ್ ರಿಲೀಸ್ : ಬಿಟೌನ್ ನಲ್ಲೂ ಹವಾ ಶುರು

ಆರ್.ಚಂದ್ರು- ಉಪ್ಪಿ ‘ಕಬ್ಜ’ ಚಿತ್ರದ ಹಿಂದಿ ಟೀಸರ್ ರಿಲೀಸ್ : ಬಿಟೌನ್ ನಲ್ಲೂ ಹವಾ ಶುರು

ಆರ್. ಚಂದ್ರು ಅವರ ಪ್ಯಾನ್‌ ಇಂಡಿಯಾ ʼಕಬ್ಜʼ ಸಿನಿಮಾದ ಟೀಸರ್ ಹಿಟ್ ಬಾಲಿವುಡ್ ನಲ್ಲೂ ಗಮನ ಸೆಳೆದಿದೆ. ಏಳು ಭಾಷೆಯಲ್ಲಿ ರಿಲೀಸ್ ಆಗಲಿರುವ ಪ್ಯಾನ್ ಇಂಡಿಯಾ ‘ಕಬ್ಜ’ದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

70 ದಶಕದ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ಹೇಳಿರುವ ಆರ್.ಚಂದ್ರು ಅವರ ಸಿನಿಮಾ ಈಗಾಗಲೇ ಕೆಜಿಎಫ್ ರೇಂಜಿನಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಟೀಸರ್ ಬಳಿಕ ‘ಕಬ್ಬ’ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಸುದ್ದಿಯೂ ಸದ್ದು ಮಾಡಿತ್ತು.

ಸಿನಿಮಾದ ಹಿಂದಿ ರೈಟ್ಸ್ ಖ್ಯಾತ ನಿರ್ಮಾಪಕ ಹಾಗೂ ವಿತರಕ ಹಿಂದಿ ವರ್ಷನ್ ಕಬ್ಜ ವಿತರಣೆ ಹಕ್ಕನ್ನು ಆನಂದ್ ಪಂಡಿತ್ ಅವರು ಪಡೆದುಕೊಂಡಿದ್ದು ಹಿಂದಿಯ ಟೀಸರ್ ಕೂಡ ಈಗ ರಿಲೀಸ್ ಆಗಿದೆ.

‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಉಪೇಂದ್ರ, ‘ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ ಸಹ ಈ ಕುರಿತು ಮಾತನಾಡಿದ್ದು, ‘ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ’ ಎಂದಿದ್ದಾರೆ.

‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ.

‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap