ಆರ್. ಚಂದ್ರು ಅವರ ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ, ಸೂಪರ್ ಹಿಟ್ ಆಗಿ ಬಿರುಗಾಳಿಯನ್ನು ಎಬ್ಬಿಸಿತು.
ಅಂಡರ್ ವರ್ಲ್ಡ್ ಜಗತ್ತಿನ ಕಥೆಯಾಗಿರುವ ʼಕಬ್ಜʼದಲ್ಲಿ ಕಿಚ್ಚ ಸುದೀಪ್ ʼಭಾರ್ಗವ್ ಭಕ್ಷಿಯಾಗಿʼ ಕಾಣಿಸಿಕೊಳ್ಳಲಿದ್ದಾರೆ. 60-70-80 ರ ದಶಕದ ರೌಡಿಸಂ ಜಗತ್ತಿನ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ.
ಚಿತ್ರದ ಟೀಸರ್ ಹವಾ ಸೃಷ್ಟಿಸಿರುವ ಮಾತುಗಳೂ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ, ಚಿತ್ರ ತಂಡ ಮತ್ತೊಂದು ವಿಷಯವನ್ನು ಹೇಳಿದೆ.
ಯಾವ ಸಿನಿಮಾ ಬೇಕಾದರೂ ಆಗಲಿ, ಅದು ರಿಲೀಸ್ ಗೂ ಮುನ್ನ ದೊಡ್ಡ ಸುದ್ದಿ ಮಾಡಿದರೆ ಅರ್ಧಕರ್ಧ ಸಿನಿಮಾ ಗೆದ್ದ ಹಾಗೆಯೇ. ಇದನ್ನು ಹೇಳಲು ಕಾರಣವೆಂದರೆ ಆರ್.ಚಂದ್ರು ಅವರ ‘ಕಬ್ಜ’ ಚಿತ್ರವೂ ಈಗ ಇದೇ ಸಾಲಿಗೆ ಸೇರಿದೆ.
ಉಪೇಂದ್ರ – ಸುದೀಪ್ ‘ಕಬ್ಜ’ ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಡೆದುಕೊಂಡಿದೆ. ಈಗ ಓಟಿಟಿ ರೈಟ್ಸ್ ದೊಡ್ಡ ಮೊತ್ತಕ್ಕೆ ಅಮೇಜಾನ್ ಪ್ರೈಮ್ ಗೆ ಮಾರಾಟವಾಗಿದೆ ಎನ್ನುವ ಸುದ್ದಿಯೊಂದು ಕೇಳಿಬಂದಿದೆ.
ಏಳು ಭಾಷೆಯಲ್ಲಿ ಅಲ್ ಓವರ್ ವರ್ಲ್ಡ್ ನಲ್ಲಿ ‘ಕಬ್ಜ’ ರಿಲೀಸ್ ಆಗಲಿದ್ದು, ಅಮೆಜಾನ್ ಪ್ರೈಮ್ ದೊಡ್ಡ ಮೊತ್ತಕ್ಕೆ ಚಿತ್ರದ ಓಟಿಟಿ ರೈಟ್ಸ್ ಪಡೆದುಕೊಂಡಿರುವುದು ಚಿತ್ರ ತಂಡದ ನಿರೀಕ್ಷೆಯನ್ನು ಹೆಚ್ಚಿಸಿದೆ.
ದೊಡ್ಡ ಮೊತ್ತ ಅಂದರೆ ಎಷ್ಟು ಅನ್ನೋದನ್ನು ಮಾತ್ರ ಚಿತ್ರ ತಂಡ ಇನ್ನು ಬಹಿರಂಗ ಪಡಿಸಿಲ್ಲ.
ಮಲ್ಟಿಸ್ಟಾರರ್ ಸಿನಿಮಾದಲ್ಲಿ ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡರೆ, ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ.

