ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಬಿಡುಗಡೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ನಾಳೆ ಈ ಹೊತ್ತಿಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ಸಿನಿಪ್ರೇಮಿಗಳು ಚಿತ್ರಮಂದಿರದಲ್ಲಿ ‘ಕಬ್ಜ’ ಸಿನಿಮಾವನ್ನ ಸಂಭ್ರಮಿಸುತ್ತಿರುತ್ತಾರೆ. ಸಿನಿಮಾದ ಟಿಕೆಟ್ ಬುಕಿಂಗ್ ಪ್ರಕ್ರಿಯ ಕೂಡ ಆರಂಭವಾಗಿದ್ದು, ಎಲ್ಲೆಡೆಯ ಟಿಕೆಟ್ ಗಳು ಬಿರುಸಾಗಿ ಮಾರಾಟವಾಗುತ್ತಿವೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ತಿರುಪತಿಯ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.


ಆರ್ ಚಂದ್ರು ನಿರ್ದೇಶನದ ‘ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್’ ಬ್ಯಾನರ್ ಅಡಿಯಲ್ಲಿ ಸಿದ್ದವಾಗಿರುವ ಪಾನ್ ಇಂಡಿಯನ್ ಸಿನಿಮಾ ‘ಕಬ್ಜ’ ನಾಳೆ(ಮಾರ್ಚ್ 17) ಪ್ರಪಂಚದಾದ್ಯಂತ ಬಿಡುಗಡೆಯಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ ಈ ಸಿನಿಮಾ ಒಂದು ಪಕ್ಕ ಆಕ್ಷನ್ ಡ್ರಾಮಾ ರೀತಿಯ ಸಿನಿಮಾ ಆಗಿರಲಿದ್ದು ಪಾನ್ ಇಂಡಿಯಾ ಮಟ್ಟದಲ್ಲೇ ಅಪಾರ ನಿರೀಕ್ಷೆ ಹುಟ್ಟಿಸಿದೆ. ಇನ್ನೇನು ಬಿಡುಗಡೆಗೆ ಒಂದು ಡಿನ ಬಾಕಿ ಇರುವಾಗ ನಾಯಕನಟ ಉಪೇಂದ್ರ ಅವರು, ನಿರ್ದೇಶಕ ಚಂದ್ರು ಅವರು ಹಾಗು ಶ್ರೀಕಾಂತ್ ಕೆ ಪಿ ಅವರು ವಿಶೇಷ ವಿಮಾನ ಒಂದರಲ್ಲಿ ತಿರುಪತಿಗೆ ಪ್ರಯಾಣ ಬೆಳಿಸಿದ್ದಾರೆ. ಸಾದ್ಯ ತಿರುಪತಿಯ ವೆಂಕಟೇಶ್ವರನ ದರ್ಶನ ಪಡೆದು, ಸಿನಿಮಾದ ಒಳಿತಿಗೆ ಪ್ರಾರ್ಥಿಸಿಕೊಂಡಿದ್ದಾರೆ.



