ಆರ್. ಚಂದ್ರ ಅವರ ಪ್ಯಾನ್ ಇಂಡಿಯಾ ʼಕಬ್ಜʼ ಸಿನಿಮಾದ ಬಹು ನಿರೀಕ್ಷಿತ ಟೀಸರ್ ರಿಲೀಸ್ ಆಗಿ ಭರ್ಜರಿ ಸದ್ದು ಮಾಡುತ್ತಿದೆ. 80 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮೊದಲನೆ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ.
ಅದ್ಧೂರಿ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಟೀಸರ್ ರಿಲೀಸ್ ಮಾಡಿ ಚಿತ್ರದ ಬಗ್ಗೆ ಮಾತಾನಾಡಿದರು.


ಅಂಡರ್ ವರ್ಲ್ಡ್ ಜಗತ್ತಿನ ಕಥೆಯಾಗಿರುವ ʼಕಬ್ಜʼದಲ್ಲಿ ಕಿಚ್ಚ ಸುದೀಪ್ ʼಭಾರ್ಗವ್ ಭಕ್ಷಿಯಾಗಿʼ ಕಾಣಿಸಿಕೊಳ್ಳಲಿದ್ದಾರೆ. 60-70-80 ರ ದಶಕದ ರೌಡಿಸಂ ಜಗತ್ತಿನ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ನಿರ್ದೇಶಕರು ಹೇಳಲಿದ್ದಾರೆ.
ಟೀಸರ್ ಆರಂಭದಲ್ಲಿ ತಾಯಿಯೊಬ್ಬಳ ದೃಶ್ಯದಿಂದ ಶುರುವಾಗುತ್ತದೆ. ಆ ಬಳಿಕ ಅದ್ಧೂರಿ ಸೆಟ್ ನಲ್ಲಿ ನೆತ್ತರು ಹರಿಯುವ ದೃಶ್ಯಗಳು, ಉಪೇಂದ್ರ ಮಾಸ್ ಲುಕ್ ನಲ್ಲಿ, ಸ್ಟೈಲಿಸ್ಟ್ ಆಗಿ ಕಾರಿನಿಂದ ಇಳಿಯುವ ಸೀನ್ ಮೈ ರೋಮಾಂಚನಗೊಳಿಸುತ್ತದೆ. ಟೀಸರ್ ಝಲಕ್ ನೋಡಿದರೆ ಪಕ್ಕಾ ಪ್ಯಾನ್ ಇಂಡಿಯಾದ ದೊಡ್ಡ ಸಿನಿಮಾ ಆಗುತ್ತದೆ ಎನ್ನುವಷ್ಟರ ಮಟ್ಟಿಗೆ ಮೂಡಿ ಬಂದಿದೆ.
ಕಿಚ್ಚ ಕ್ಲೀನ್ ಶೇವ್ ನಲ್ಲಿ ‘ಭಾರ್ಗವ್ ಭಕ್ಷಿ’ ಕಾಣಿಸಿಕೊಳ್ಳುತ್ತಾರೆ. ಆ್ಯಕ್ಷನ್ ದೃಶ್ಯಕ್ಕೆ ತಕ್ಕ ರವಿ ಬಸ್ರೂರು ಮ್ಯೂಸಿಕ್ ಟೀಸರ್ ನ ಹೈಪ್ ಹೆಚ್ಚಿಸುತ್ತದೆ.
ಒಂದು ದಿನದೊಳಗೆ 7 ಮಿಲಿಯನ್ ಗೂ ಅಧಿಕ ಮಂದಿ ಟೀಸರ್ ವೀಕ್ಷಿಸಿ, ಲಕ್ಷಕ್ಕೂ ಹೆಚ್ಚಿನ ಕಾಮೆಂಟ್ಸ್ ಮಾಡಿ ಹೊಗಳಿದ್ದಾರೆ.
ಮಲ್ಟಿಸ್ಟಾರರ್ ಸಿನಿಮಾದಲ್ಲಿ ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡರೆ, ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

