HomeNewsಚಿತ್ರರಂಗವನ್ನೆಲ್ಲ 'ಕಬ್ಜ' ಮಾಡುತ್ತಿದೆ ಈ ಟ್ರೈಲರ್! ಹೇಗಿದೆ 'ಕಬ್ಜ' ಸಿನಿಮಾದ ಮುನ್ನೋಟ?

ಚಿತ್ರರಂಗವನ್ನೆಲ್ಲ ‘ಕಬ್ಜ’ ಮಾಡುತ್ತಿದೆ ಈ ಟ್ರೈಲರ್! ಹೇಗಿದೆ ‘ಕಬ್ಜ’ ಸಿನಿಮಾದ ಮುನ್ನೋಟ?

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ ‘ಕಬ್ಜ’ ಸಿನಿಮಾ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಹಾಗು ಕನ್ನಡಿಗರು ಹೆಮ್ಮೆ ಪಡುತ್ತಿರುವ ವಿಚಾರ. ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಎಲ್ಲಾ ಸಿನಿಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಸಿನಿಮಾವಾಗಿದೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲರ ಪ್ರಶಂಸೆ, ನಿರೀಕ್ಷೆ ಹಾಗು ತನ್ನ ಸಿನಿಮಾಗಿದ್ದ ತೂಕ ಎಲ್ಲವನ್ನೂ ಹೆಚ್ಚಿಸಿಕೊಂಡಿದೆ.

1945 ಎಂದು ಆರಂಭವಾಗೋ ಚಿತ್ರದ ಟ್ರೈಲರ್, ಬ್ರಿಟಿಷ್ ಅಧಿಕಾರಿಯೊಬ್ಬರ ಹಾಗು ಭಾರತೀಯನೊಬ್ಬನ ನಡುವಿನ ಸಂಘರ್ಷದ ಜೊತೆ ಮುಂದುವರಿಯುತ್ತದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕಂಚಿನ ಕಂಠದ ಡೈಲಾಗ್ ಗಳು ಕಥೆಯ ಹಿನ್ನೆಲೆ ಹೇಳುವಂತಿರುವುದು ಸಿನಿಪ್ರೇಮಿಗಳಿಗೆ ಇನ್ನಷ್ಟು ಆಸಕ್ತಿ ಹುಟ್ಟಿಸಿದೆ. ಜೊತೆಗೆ ಕಥೆಯಲ್ಲಿ ತಂದೆಯ ಹಿನ್ನೆಲೆ, ತಾಯಿಯ ಪರಿಶ್ರಮ, ಅಣ್ಣ-ತಮ್ಮರ ಭಾಂದವ್ಯ, ಅರಮನೆಯ ರಾಣಿ ಹಾಗು ಅವಳೊಡಗಿನ ಪ್ರೇಮಕತೆ ಸೇರಿದಂತೆ ಇನ್ನು ಹಲವು ಕುತೂಹಲಕಾರಿ ಅಂಶಗಳಿವೆ. ಎಲ್ಲಕಿಂತ ಹೆಚ್ಚು ರೋಮಾಂಚನ ನೀಡಿದ್ದು, ಏರ್ ಫೋರ್ಸ್(ವಾಯು ಪಡೆ)ಯಲ್ಲಿ ಕೆಲಸ ಮಾಡುವ ನಾಯಕ ‘ಅರ್ಕೇಶ್ವರ'(ಉಪೇಂದ್ರ)ನ ಪಾತ್ರ. ಇಂತಹ ಹಿನ್ನೆಲೆಯಿರುವ ಅರ್ಕೇಶ್ವರ ಅದ್ಹೇಗೆ ಗ್ಯಾಂಗ್ ಸ್ಟರ್ ಆದ? ರೌಡಿಸಂ ಗೆ ಇಳಿದ ನಂತರ ಅವನ ಜೀವನ ಏನಾಯಿತು? ಬ್ಯೋಮ್ ಕೇಶ್ ಭಕ್ಷಿ(ಸುದೀಪ್) ಹಾಗು ಅರ್ಕೇಶ್ವರ ನ ನಡುವಿನ ಸಂಬಂಧ ಏನು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ‘ಕಬ್ಜ’ ಸಿನಿಮಾವೇ ಉತ್ತರ ನೀಡಬೇಕಿದೆ.

ಇದೇ ಮಾರ್ಚ್ 17ರಂದು ಪ್ರಪಂಚದ ವಿವಿಧೆಡೆ ಬಿಡುಗಡೆಯಾಗುತ್ತಿರುವ ‘ಕಬ್ಜ’ ಸಿನಿಮಾವನ್ನ ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸಿದ್ದಪಡಿಸಲಾಗಿದೆ. ಟ್ರೈಲರ್ ನ ಪ್ರತಿಯೊಂದು ದೃಶ್ಯಗಳಲ್ಲೂ ಕೂಡ ಶಿವಕುಮಾರ್ ಅವರ ಅದ್ವಿತೀಯ ಕಲಾ ನಿರ್ದೇಶನ ಹಾಗು ಎ ಜೆ ಶೆಟ್ಟಿಯವರ ಪ್ರಭುದ್ದ ಛಾಯಾಗ್ರಾಹಣದ ಕೈಚಳಕ ಎದ್ದು ಕಾಣುತ್ತದೆ. ಇನ್ನು ರವಿ ಬಸ್ರುರ್ ಅವರ ಸಂಗೀತದ ಬಗ್ಗೆ ಹೇಳಿದಷ್ಟು ಸಾಲದು. ಚಂದ್ರು ಅವರ ನಿರ್ದೇಶನದ ಜೊತೆಗೆ ಎಲ್ಲಾ ತಂತ್ರಜ್ಞರ ತಂಡಕ್ಕೂ ಪ್ರಶಂಸೆ ನೀಡಲೇ ಬೇಕು.

ಇನ್ನು ‘ಕಬ್ಜ’ದ ತಾರಾಗಣ ಕೂಡ ಅಷ್ಟೇ ಭವ್ಯವಾದದ್ದು. ನಾಯಕ್ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶ್ರೀಯ ಶರಣ್, ಮುರುಳಿ ಕೃಷ್ಣ, ನವಾಬ್ ಶಾಹ್, ಕೋಟ ಶ್ರೀನಿವಾಸ್ ರಾವ್, ಪೊಸನ್ನಿ ಕೃಷ್ಣ ಮುರುಳಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ವಿವಿಧ ಭಾಗಗಳ ಗಣ್ಯ ನಟರುಗಳ ದಂಡೇ ಇದೆ. ಇದೆ ಮಾರ್ಚ್ 17ಕ್ಕೆ ಸಿನಿಮಾ ಬಿಡುಗಡೆಯಗುತ್ತಿದ್ದು, ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್ ಎಲ್ಲೆಡೆ ಉತ್ತಮ ಪ್ರಶಂಸೆ ಪಡೆಯುವ ಮೂಲಕ ಸಿನಿಮಾದ ಬಗೆಗಿನ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ.

RELATED ARTICLES

Most Popular

Share via
Copy link
Powered by Social Snap