HomeNewsಕಬ್ಜ ಚಿತ್ರದಲ್ಲಿ ಸ್ಟೆಪ್ ಹಾಕಲಿರುವ ಬಸಣ್ಣಿ ಬೆಡಗಿ ತಾನ್ಯಾ ಹೋಪ್!

ಕಬ್ಜ ಚಿತ್ರದಲ್ಲಿ ಸ್ಟೆಪ್ ಹಾಕಲಿರುವ ಬಸಣ್ಣಿ ಬೆಡಗಿ ತಾನ್ಯಾ ಹೋಪ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ “ಯಜಮಾನ” ಚಿತ್ರದಲ್ಲಿ ಬಸಣ್ಣಿ ಹಾಡಿಗೆ ತಕ ತೈ ಎಂದು ಸ್ಟೆಪ್ ಹಾಕಿದ್ದ ತಾನ್ಯಾ ಹೋಪ್ ಅವರು ಇದೀಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಬಸಣ್ಣಿ ಹಾಡಿನ ಮೂಲಕ 2017ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ತಾನ್ಯ ಹೋಪ್. ಈಗ ಮತ್ತೆ ಇನ್ನೊಂದು ವಿಶೇಷ ಹಾಡಿದ ಮೂಲಕ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು! ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಕಬ್ಜ ಚಿತ್ರದಲ್ಲಿ ತಾನ್ಯಾ ಹೋಪ್ ಅವರು ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ಮಾರ್ಚ್ 17ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಚಿತ್ರೀಕರಣವೆಲ್ಲವೂ ಮುಗಿದಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಬಸಣ್ಣಿ ಹಾಡಿನಲ್ಲಿ ಜನಮನ ಗೆದ್ದಿರುವ ತಾನ್ಯಾ ಅವರು ಇದೀಗ ಮತ್ತೆ ಈ ವಿಶೇಷ ಹಾಡಿನಲ್ಲೂ ಕಾಣಿಸಿಕೊಳ್ಳಲಿದ್ದು ಅವರ ನೃತ್ಯವನ್ನು ಜಾನಿ ಮಾಸ್ಟರ್ ಅವರು ಕೊರಿಯೋಗ್ರಾಫಿ ಮಾಡಲಿದ್ದಾರೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ರಾ ರಾ ರಕಮ್ಮ ಹಾಡಿಗೆ ಕೊರಿಯೋಗ್ರಾಫಿ ಮಾಡಿ ಎಲ್ಲೆಡೆ ಸೆನ್ಸೇಶನ್ ಮೂಡಿಸಿದ ಜಾನಿ ಮಾಸ್ಟರ್ ಅವರ ಕೊರಿಯೋಗ್ರಾಫಿ ಎಂದರೆ ಮತ್ತೆ ಒಂದು ಅತ್ಯದ್ಭುತ ಹಾಡನ್ನು ನಿರೀಕ್ಷಿಸಬಹುದಾಗಿದೆ.
ರಾ ರಾ ರಕಮ್ಮ ಹಾಡನ್ನು ಜನರು ಬಹಳ ಮೆಚ್ಚಿದ್ದು ಮಾತ್ರವಲ್ಲದೇ ರೀಲ್ಸ್ ಗಳಲ್ಲಿ ಹಾಗೂ ವಿಡಿಯೋಗಳಲ್ಲಿ ಆ ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿ ವೈರಲ್ ಆಗಿದ್ದರು. ಹಾಗಾಗಿ ಇದೀಗ ತಾನ್ಯಾ ಹೋಪ್ ಅವರ ಕಬ್ಜ ಚಿತ್ರದ ಹಾಡಿನ ಬಗ್ಗೆಯೂ ಬಹಳಷ್ಟು ಹೋಪ್ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು.

ಸದ್ಯಕ್ಕೆ ನಿರ್ದೇಶಕ ಆಯುಷ್ ಶರ್ಮ ಅವರ ನಿರ್ದೇಶನದಲ್ಲಿ ಒಂದು ಹಿಂದಿ ಚಿತ್ರದಲ್ಲಿಯೂ ಬ್ಯುಸಿಯಾಗಿರುವ ತಾನ್ಯ ಹೋಪ್ ಅವರು ತಮ್ಮ ಅಭಿನಯದ ಮೂರು ತಮಿಳು ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ‘ವಲ್ಲನ್’, ‘ಗೋಲ್ಮಾ’ ಹಾಗೂ ‘ಕಿಕ್’ ಎಂಬ ಮೂರು ತಮಿಳು ಚಿತ್ರಗಳು ಬಿಡುಗಡೆಗೆ ತಯಾರಾಗಿದ್ದು ಮೂರರಲ್ಲೂ ತಾನ್ಯ ಹೋಪ್ ಅವರು ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅತಿ ಶೀಘ್ರದಲ್ಲಿ ಈಕೆ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿಯೂ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಬಹಳಷ್ಟು ಬ್ಯುಸಿ ಇರುವ ನಟಿಗಳ ಪೈಕಿ ತಾನ್ಯಾ ಹೋಪ್ ಕೂಡಾ ಒಬ್ಬರು. ಕಬ್ಜ ಚಿತ್ರದ ಈ ವಿಶೇಷ ಹಾಡು ಅವರನ್ನು ಇನ್ನಷ್ಟು ಫೇಮಸ್ ಮಾಡಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇದೆ. ಜನ ಹಾಡನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

RELATED ARTICLES

Most Popular

Share via
Copy link
Powered by Social Snap