ಆರ್.ಚಂದ್ರು ಅವರ ಪ್ಯಾನ್ ಇಂಡಿಯಾ ‘ಕಬ್ಜ’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ.
ರಿಯಲ್ ಸ್ಟಾರ್ ಉಪೇಂದ್ರ ರಫ್ & ಟಫ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು,ಕಿಚ್ಚ ಭಾರ್ಗವ್ ಭಕ್ಷಿಯೆಂಬ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
60, 70, 80ರ ದಶಕದ ಅಂಡರ್ ವರ್ಲ್ಡ್ ಕಥೆಯನ್ನು ರೆಟ್ರೋ ಸ್ಟೈಲ್ ನಲ್ಲಿ ಚಂದ್ರು ಹೇಳಲು ಹೊರಟಿದ್ದಾರೆ. ಇದೊಂದು ಮಲ್ಟಿಸ್ಟಾರರ್ ಸಿನಿಮಾ, ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡರೆ, ಕಬೀರ್ ದುಹಾನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ ರಾವ್ , ಜಯ ಪ್ರಕಾಶ್, ಕಾಟ್ ರಾಜು ಮತ್ತು ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ರವಿ ಬಸ್ರೂರು ಮ್ಯೂಸಿಕ್ ನೀಡಿದ್ದಾರೆ. ಮೇಕಿಂಗ್ ವಿಡಿಯೋಗಳನ್ನು ಸುದ್ದಿಯಾಗಿದ್ದ ‘ಕಬ್ಜ’ ಉಪೇಂದ್ರ ಹುಟ್ಟು ಹಬ್ಬಕ್ಕೆ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ ಅಂದರೆ ಸೆಪ್ಟೆಂಬರ್ 17 ರಂದು ಟೀಸರ್ ಹೊರ ಬೀಳಲಿದೆ.
ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಮಾತಾನಾಡಿದ್ದು,
ಕಬ್ಜ ಚಿತ್ರದ ಟೀಸರ್, ಪೋಸ್ಟರ್ ಗಳನ್ನು ಈಗಾಗಲೇ ನೋಡಿದ್ದೀರಿ, ಸತತ ಮೂರು ವರ್ಷದ ನಂತರ ಪರಿಶ್ರಮವನ್ನು ಮಾಡಿ,ಮೊದಲ ಟೀಸರ್ ರಿಲೀಸ್ ಮಾಡಲ ಹೊರಟಿದೆ. ‘ಕಬ್ಜ’ ಚಿತ್ರ ತಂಡಕ್ಕೆ ಶುಭಾಶಯ ಎಂದು ಹೇಳಿದ್ದಾರೆ.

