ಅಸಂಖ್ಯ ಅಭಿಮಾನಿಗಳ ‘ಡಿ ಬಾಸ್’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಸಿನಿಮಾ ‘ಕಾಟೇರ’. ಶೀರ್ಷಿಕೆ ಅನಾವರಣಕ್ಕೆ ಬಿಟ್ಟಂತಹ ಟೀಸರ್ ನಿಂದ ಸಿನಿಮಾದ ಬಗೆಗಿನ ನಿರೀಕ್ಷೆ ಮುಗಿಲು ಮುಟ್ಟಿದೆ ಎಂದರೆ ತಪ್ಪಾಗದು. ‘ರಾಬರ್ಟ್’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡಂತಹ ತರುಣ್ ಸುಧೀರ್ ಹಾಗು ದರ್ಶನ್ ಅವರ ಜೋಡಿ ಈ ಸಿನಿಮಾದ ಮೂಲಕ ಮತ್ತೊಮ್ಮೆ ಒಂದಾಗುತ್ತಿದ್ದೂ, ಇದು ಸಿನಿಮಾ ಸದ್ದು ಮಾಡುತ್ತಿರಲು ಇನ್ನೊಂದು ಪ್ರಮುಖ ಕಾರಣವೂ ಹೌದು. ಸದ್ಯ ಈ ಸಿನಿಮಾಡ ನಾಯಕಿ ಹೇಗಿರಲಿದ್ದಾರೆ ಎಂಬುಡನ್ನು ಪ್ರೇಕ್ಷಕರಿಗೆ ತೋರಿಸ ಹೊರಟಿದೆ ಚಿತ್ರತಂಡ.
ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಈ ಬಹುನಿರೀಕ್ಷಿತ ಸಿನಿಮಾದ ನಾಯಕಿಯಾಗಿರುವವರು ಮಾಲಾಶ್ರೀ ಅವರ ಮಗಳಾದ ರಾಧನಾ ರಾಮ್ ಅವರು. ತಮ್ಮ ಮೊದಲನೇ ಸಿನಿಮಾದಲ್ಲೇ ಡಿ ಬಾಸ್ ಗೆ ನಾಯಕಿಯಾಗಿ ನಟಿಸುತ್ತಿರುವ ಇವರು, ಚಿತ್ರತಂಡದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಸಿನಿಮಾದಲ್ಲಿ ನಾಯಕಿಯಾಗಿ ಹೇಗೇ ಕಾಣಲಿದ್ದಾರೆ ಎಂಬ ಮುನ್ನೋಟವನ್ನು ಇದೆ ಯುಗಾದಿ ಹಬ್ಬಕ್ಕೆ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ. ಇದೆ ಮಾರ್ಚ್ 22ರ ಬೆಳಿಗ್ಗೆ 10ಗಂಟೆಗೆ ನಾಯಕಿ ರಾಧನಾ ಅವರು ಅಧಿಕೃತವಾಗಿ ಅನಾವರಣಗೊಳ್ಳಲಿದ್ದಾರೆ. ಹೀಗೆಂದು ಹೇಳಲು ಬಿಟ್ಟಿರುವ ಪೋಸ್ಟರ್ ನಲ್ಲಿ ‘ಬುದ್ದಿವಂತಿಕೆ, ಧೈರ್ಯ ಹಾಗು ಸೌಂದರ್ಯ! ‘ಕಾಟೇರ’ದ ತೀಕ್ಷ್ಣ ನಾಯಕಿ ಅನಾವರಣಗೊಳ್ಳಲು ಸಿದ್ದವಾಗಿದ್ದಾಳೆ’ ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ. ಹಾಗಾಗಿ ದರ್ಶನ್ ಅವರ 56ನೇ ಚಿತ್ರದ ನಾಯಕಿಯ ಪಾತ್ರ ಜನಮೆಚ್ಚುವ, ಜನರ ಮನದಲ್ಲಿ ಉಳಿವಂತಹ ಪಾತ್ರವಾಗಿರಲಿದೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡುತ್ತಿದೆ.
ತರುಣ್ ಸುಧೀರ್ ಅವರ ನಿರ್ದೇಶನದ ಮೂರನೇ ಸಿನಿಮಾವಾದ ‘ಕಾಟೇರ’ಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಇರಲಿದೆ. ಇದು ಕೂಡ ಕನ್ನಡ ಸಿನಿಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ. ಇನ್ನು ರಾಕ್ ಲೈನ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ಸಿದ್ದವಾಗುತ್ತಿದ್ದು, ನೈಜ ಘಟನೆ ಆಧಾರಿತ ಕಥೆ ಸಿನಿಮಾದಲ್ಲಿರಲಿದೆ. ಪ್ರಾಯಷಃ ರೈತಸಮುದಾಯದ ಬಂಡಾಯದ ಬಗ್ಗೆ ಸಿನಿಮಾದ ಕಥೆ ಇರಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದ್ದೂ, ಎಲ್ಲದಕ್ಕೂ ಕಾದು ನೋಡಬೇಕಿದೆ.

