ಹೊಸ ಬಗೆಯ ಕಥೆಯನ್ನು ಆಯ್ದುಕೊಳ್ಳುವ ಚಿನ್ನರಿ ಮುತ್ತ ವಿಜಯ್ ರಾಘವೇಂದ್ರ ಈಗ ‘ಕಾಸಿನ ಸರ’ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಎನ್. ಆರ್. ನಂಜುಂಡೇಗೌಡ ನಿರ್ದೇಶನ ‘ಕಾಸಿಮ ಸರ’ ಚಿತ್ರದ ಡಬ್ಬಿಂಗ್ ನ್ನು ಇತ್ತೀಚೆಗೆ ವಿಜಯ್ ರಾಘವೇಂದ್ರ ಅವರು ಮಾಡಿದ್ದಾರೆ.
ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ಈಗ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರ ತಂಡ ನಿರತವಾಗಿದೆ.


ಕ್ರಿಯೇಷನ್ಸ್ ಲಾಂಚನದಲ್ಲಿ ಈ. ದೊಡ್ಡನಾಗಯ್ಯ ನಿರ್ಮಿಸಿರುವ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ ಹಾಗೂಉಮಾಶ್ರೀ,ನೀನಾಸಂ ಅಶ್ವಥ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೆಗೌಡ, ಮಂಡ್ಯ ರಮೇಶ್, ಮೀನಪ್ರಕಾಶ್ ನಟಿಸಿದ್ದಾರೆ. ಇದರೊಂದಿಗೆ ಸಚಿವ ಸಚಿವ ಎಸ್. ಟಿ. ಸೋಮಶೇಖರ್ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರಕ್ಕೆ ಹೆಚ್. ಸಿ ವೇಣು ಛಾಯಾಗ್ರಹಣ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಸುರೇಶ್ ಅರಸ್ ಸಂಕಲನ ಮಾಡಿದ್ದಾರೆ. ಎಸ್. ಜಿ. ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ. ವಸಂತ್ ರಾವ್ ಕುಲಕರ್ಣಿ ಕಲೆ, ನಾಗೇಂದ್ರ, ಬಿ. ರಾಮಮೂರ್ತಿ ಕೋಲಾರ ನಾಗೇಶ್ ಚಿತ್ರದ ತಾಂತ್ರಿಕ ವರ್ಗದಲ್ಲಿದ್ದಾರೆ.



