HomeNewsಅರಮನೆ ನಗರಿಯಲ್ಲಿ "ಜಸ್ಟ್‌ ಪಾಸ್‌ʼʼ ಚಿತ್ರೀಕರಣ

ಅರಮನೆ ನಗರಿಯಲ್ಲಿ “ಜಸ್ಟ್‌ ಪಾಸ್‌ʼʼ ಚಿತ್ರೀಕರಣ

ವಿಭಿನ್ನ ಕಥಾಹಂದರವುಳ್ಳ “ಜಸ್ಟ್‌ ಪಾಸ್” ಸಿನಿಮಾದ ಚಿತ್ರೀಕರಣ ಅರಮನೆ ನಗರಿ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ.


ಈ ಸಿನಿಮಾವನ್ನು ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿದ್ದಾರೆ. ಈ ಹಿಂದೆ “ತರ್ಲೆ ವಿಲೇಜ್”, ” ಪರಸಂಗ “, “ದೊಡ್ಡಹಟ್ಟಿ ಬೋರೇಗೌಡ” ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಕೆ.ಎಂ.ರಘು ʼಜಸ್ಟ್‌ ಪಾಸ್” ಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.


ಮೈಸೂರಿನ ಹಾರ್ಡ್ವಿಕ್ ಪಬ್ಲಿಕ್ ಕಾಲೇಜ್, ನಂಜರಾಜ ಹಾಲ್, ಆಲಮ ಚೌಟ್ರಿ, ಗೌರ್ನಮೆಂಟ್ ಗೆಸ್ಟ್ ಹೌಸ್, ಲೇಡಿಸ್ ಕ್ಲಬ್ ಮುಂತಾದ ಕಡೆ 25 ದಿನಗಳ ಚಿತ್ರೀಕರಣ ನಡೆದಿದೆ. ನಾಯಕ ಶ್ರೀ, ನಾಯಕಿ ಪ್ರಣತಿ, ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಂಬಿನಾಡು, ಗೋವಿಂದೇಗೌಡ, ದಾನಪ್ಪ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.


“ತರ್ಲೆ ವಿಲೇಜ್”, ” ಪರಸಂಗ “, “ದೊಡ್ಡಹಟ್ಟಿ ಬೋರೇಗೌಡ” ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಂ.ರಘು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ “ಜಸ್ಟ್ ಪಾಸ್” ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸುಜಯ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap