HomeNewsಮತ್ತೊಂದು ಮನರಂಜಿಸೋ ಹಾಡಿಗೆ ದನಿಯಾದರು ನಟ ಶರಣ್

ಮತ್ತೊಂದು ಮನರಂಜಿಸೋ ಹಾಡಿಗೆ ದನಿಯಾದರು ನಟ ಶರಣ್

ನಾಯಕ ನಟ ಶರಣ್ ಅವರು ತಮ್ಮ ನಟನೆಗೆ ಮಾತ್ರವಲ್ಲದೆ, ಗಾಯಕರಾಗಿಯೂ ಕನ್ನಡಿಗರಿಗೆ ಚಿರಪರಿಚಿತವಾಗಿರುವವರು. ಅದೆಷ್ಟೋ ಎಣ್ಣೆ ಸಾಂಗ್ ಗಳಿಗೆ ಶರಣ್ ಅವರನ್ನೇ ಹುಡುಕುತ್ತಾರೆ. ಸದ್ಯ ಶರಣ್ ಅವರ ಕಂಠದಿಂದ ಮತ್ತೊಂದು ಜಾಲಿ ಗೀತೆ ಸಿದ್ಧವಾಗಿದೆ. ಅದುವೇ ‘ಜಸ್ಟ್ ಪಾಸ್’ ಸಿನಿಮಾದ “ಎಕ್ಸ್ ಕ್ಯೂಸ್ ಮೀ ಕೇಳಿ ನನ್ನ ಲೆಕ್ಚರು, ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು” ಎಂಬ ಹಾಡು. ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ‘ಜಸ್ಟ್ ಪಾಸ್’ ಸಿನಿಮಾ ಒಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಆಗಿರಲಿದೆ. ಸದ್ಯ ಇದೇ ಸಿನಿಮಾದಲ್ಲಿ ಶರಣ್ ಅವರು ಹೊಸ ಹಾಡೊಂದನ್ನು ಹಾಡಿದ್ದಾರೆ.

ಕೆ ಎಂ ರಘು ಅವರು ಕಥೆ, ಚಿತ್ರಕತೆ ಬರೆದು ಅವರೇ ನಿರ್ದೇಶನ ಮಾಡಿರುವ ಈ ‘ಜಸ್ಟ್ ಪಾಸ್’ ಸಿನಿಮಾವನ್ನ ಕೆ ವಿ ಶಶಿಧರ್ ನಿರ್ಮಾಣ ಮಾಡಿದ್ದಾರೆ. ಶ್ರೀ ಹಾಗು ಪ್ರಣತಿ ಅವರು ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ‘ಜಸ್ಟ್ ಪಾಸ್’ ಸಿನಿಮಾದಲ್ಲಿ ಹರ್ಷವರ್ಧನ್ ರಾಜ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹೊಸ ಗೀತೆಯೊಂದನ್ನು ಶರಣ್ ಅವರು ಹಾಡಿದ್ದಾರೆ. ಈ ಹಾಡಿಗೆ ಹೆಸರಾಂತ ಚಿತ್ರ ಸಾಹಿತಿ ಡಾ| ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿರುವುದು ಇನ್ನೊಂದು ವಿಶೇಷ. ‘ಎಕ್ಸ್ ಕ್ಯೂಸ್ ಮೀ ಕೇಳಿ ನನ್ನ ಲೆಕ್ಚರು, ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು’ ಎಂಬ ಈ ವಿಭಿನ್ನ ರೀತಿಯ ಹಾಡು ಶರಣ್ ಅವರ ದನಿಯಲ್ಲಿ ತಯಾರಾಗಿದೆ.

ಸಾಧು ಕೋಕಿಲ, ರಂಗಾಯಣ ರಘು, ದೀಪಕ್ ರೈ, ಪ್ರಕಾಶ್ ತುಮ್ಮಿನಾಡು, ಸುಚೆಂದ್ರ ಪ್ರಸಾದ್ ಮುಂತಾದ ಹೆಸರಾಂತ ನಟರು ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕೆ ಎಂ ರಘು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ‘ಜಸ್ಟ್ ಪಾಸ್’ ಚಿತ್ರಕ್ಕೆ ಸುಜಯ್ ಕುಮಾರ್ ಅವರ ಛಾಯಾಗ್ರಾಹಣವಿದೆ. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳು ಸದ್ಯದಲ್ಲೇ ಹೊರಬೀಳಲಿವೆ.

RELATED ARTICLES

Most Popular

Share via
Copy link
Powered by Social Snap