ಖ್ಯಾತ ಉದ್ಯಮಿಗಳು, ಹೆಸರಾಂತ ರಾಜಕೀಯ ವ್ಯಕ್ತಿ ಜನಾರ್ಧನ ರೆಡ್ಡಿ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ.
ಜನಾರ್ಧನ ರೆಡ್ಡಿ ರವರನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಬಣಕಾರ್‌ರವರು, ನಿಕಟಪೂರ್ವ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾದ ಡಿ.ಕೆ.ರಾಮಕೃಷ್ಣ(ಪ್ರವೀಣ್ ಕುಮಾರ್)ರವರು, ಜಂಟಿ ಕಾರ್ಯದರ್ಶಿಗಳಾದ ಶ್ರೀ ರಮೇಶ್ ಯಾದವರವರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಎ.ಗಣೇಶ್‌ರವರು, ಶ್ರೀಯುತ ಜನಾರ್ಧನ ರೆಡ್ಡಿರವರನ್ನು ಬಿ.ಜೆ.ಪಿ.ಯ ಶ್ರೀ ರವಿಶಂಕರ್ ರವರ ಮುಖಾಂತರ ಭೇಟಿ ಮಾಡಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ “ಅನ್ನಧಾತರ ಭವನ” ದ ನಿರ್ಮಾಣ ಕಾಮಗಾರಿಗೆ ಆರ್ಥಿಕ ಸಹಾಯ ಕೋರಿದಾಗ, ನಾನು ನಿರ್ಮಾಪಕನಾಗಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದರು.
ಅವರಿಗೆ ನಿರ್ಮಾಪಕರ ಸಂಘದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.
ಈಗಾಗಲೇ ಮೆ:ಹೊಂಬಾಳೆ ಫಿಲಂಸ್ ಸಂಸ್ಥೆಯ ನಿರ್ಮಾಪಕರಾದ ಶ್ರೀ ವಿಜಯ ಕಿರಗಂದೂರ್‌ರವರನ್ನು ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಸಾ.ರಾ.ಗೋವಿಂದುರವರು, ಸಂಚಾಲಕರಾದ ಶ್ರೀ ಎನ್.ಎಂ.ಸುರೇಶ್‌ರವರು ಮತ್ತು ಶ್ರೀ ಎ.ಗಣೇಶ್‌ರವರು ಹಾಗೂ ಕಾರ್ಯಕಾಲಿ ಸಮಿತಿ ಸದಸ್ಯರಾದ ಶ್ರೀ ರಾಜೇಶ್ ಬ್ರಹ್ಮಾವರ್‌ರವರು ಭೇಟಿ ಮಾಡಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ “ಅನ್ನದಾತರ ಭವನ” ದ ನಿರ್ಮಾಣ ಕಾಮಗಾರಿಗೆ ಆರ್ಥಿಕ ಸಹಾಯ ಕೋರಿದಾಗ, ಸಂತೋಷದಿಂದ ನೀಡಲು ಒಪ್ಪಿರುವುದರಿಂದ ಅವರಿಗೂ ಕೂಡ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದೆ ನಿರ್ಮಾಪಕರ ಸಂಘ.



