ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ 169 ನೇ ಚಿತ್ರ ʼಜೈಲರ್ʼ ಬಗ್ಗೆ ಹೊಸ ಅಪ್ ಡೇಟ್ ಹೊರ ಬಿದ್ದಿದೆ
ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೊಂದಿಗೆ ಮಾಡುತ್ತಿರುವ ʼಜೈಲರ್ʼ ಸಿನಿಮಾದ ಸನ್ ಪಿಕ್ಚರ್ಸ್ ಹೊಸ ಅಪ್ ಡೇಟ್ ನೀಡಿದೆ.
ನೆಲ್ಸನ್ ದಿಲೀಪ್ ಕುಮಾರ್ ʼಡಾಕ್ಟರ್ʼ ಸಿನಿಮಾದ ಬಳಿಕ ವಿಜಯ್ ಅವರೊಂದಿಗೆ ಮಾಡಿದ ʼಬೀಸ್ಟ್ʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ರಜನಿ ಅವರ 2021 ರಲ್ಲಿ ʼಅಣ್ಣಾತೆʼ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿತ್ತು. ಈಗ ನೆಲ್ಸನ್ ಅವರೊಂದಿಗೆ ಮಾಡುತ್ತಿರುವ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆಯಿದೆ.
ಅಭಿಮಾನಿಗಳಲ್ಲಿ ಸನ್ ಪಿಕ್ಚರ್ಸ್ ಮಾಡಿರುವ ಟ್ವೀಟ್ ಖುಷಿ ತಂದಿದೆ. ಸೋಮವಾರದಿಂದ ಚಿತ್ರದ ಶೂಟ್ ಆರಂಭವಾಗಿದೆ ಎಂದು ಸನ್ ಪಿಕ್ಷರ್ಸ್, ಫಸ್ಟ್ ಲುಕ್ ರಿಲೀಸ್ ಮಾಡಿ, ವಿಷಯವನ್ನು ಹಂಚಿಕೊಂಡಿದೆ. ಚೆನ್ನೈಯಲ್ಲಿ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗಿದೆ.
ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷೆಲ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2023 ರ ಬೇಸಿಗೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

