ಸೂಪರ್ ಸ್ಟಾರ್ ರಜನಿಕಾಂತ್ – ನೆಲ್ಸನ್ ದಿಲೀಪ್ ಕುಮಾರ್ ಅವರ ‘ಜೈಲರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
ಇತ್ತೀಚೆಗೆ ರಜಿನಿ ಹುಟ್ಟು ಹಬ್ಬಕ್ಕೆ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ‘ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲಿ ಕಾಣಿಸಿಕೊಂಡ ರಜಿನಿ ಅವರ ಲುಲ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಸಿನಿಮಾ ತಂಡದಿಂದ ಹೊಸ ಅಪ್ಡೇಟ್ ಹೊರ ಬಂದಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಕನ್ನಡದ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಸುದ್ದಿ ಸದ್ದು ಮಾಡಿತ್ತು. ಇದೀಗ ಸಿನಿಮಾದಲ್ಲಿ ಬಾಲಿವುಡ್ ನಟ ಜಾಕಿ ಶ್ರಾಫ್ ಬಹು ನಿರೀಕ್ಷಿತ ‘ಜೈಲರ್’ ನಲ್ಲಿ ನಟಿಸಲಿದ್ದಾರೆ ಎನ್ನುವುದನ್ನು ನಿರ್ಮಾಣ ಸಂಸ್ಥೆ ಟ್ವೀಟ್ ಮೂಲಕ ಅಧಿಕೃತವಾಗಿ ಹೇಳಿದೆ.
ಇದರಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ತಮನ್ನಾ ಭಾಟಿಯಾ, ಸುನಿಲ್, ಡಾ ಶಿವ ರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಅವರು ಸಹ ಅಭಿನಯಿಸಿದ್ದಾರೆ.

