ನೆಲ್ಸನ್ – ರಜಿನಿಕಾಂತ್ ಅವರ ಈ ವರ್ಷದ ಬಹು ನಿರೀಕ್ಷಿತ ‘ಜೈಲರ್’ ದಿನ ಕಳೆದಂತೆ ಒಂದೊಂದು ಅಪ್ಡೇಟ್ ನೀಡಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬಹು ತಾರಾಗಣವುಳ್ಳ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಕೆಲ ದಿನಗಳ ಶಿವರಾಜ್ ಕುಮಾರ್ ಅವರ ಸ್ಟಿಲ್ ರಿಲೀಸ್ ಆಗಿ ವೈರಲ್ ಆಗಿತ್ತು.
ಇದೀಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಕೂಡ ‘ಜೈಲರ್’ ನ ಭಾಗವಾಗಿದ್ದಾರೆ. ಸಿನಿಮಾದಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ ಎನ್ನುವುದನ್ನು ಚಿತ್ರ ತಂಡ ಸ್ಟಿಲ್ ವೊಂದನ್ನು ರಿಲೀಸ್ ಮಾಡಿ ಅಧಿಕೃತಗೊಳಿಸಿದ್ದಾರೆ. ಇದೇ ಮೊದಲ ಬಾರಿ ಮೋಹನ್ ಲಾಲ್ ರಜಿನಿಕಾಂತ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜಿನಿಕಾಂತ್ ಅವರ ಪಾತ್ರದ ಝಲಕನ್ನು ಇತ್ತೀಚೆಗೆ ಸಿನಿಮಾ ತಂಡ ರಿಲೀಸ್ ಮಾಡಿತ್ತು.
ರಮ್ಯಾ ಕೃಷ್ಣನ್, ವಸಂತ್ ರವಿ ಮತ್ತು ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ.

