ವಿಷ್ಣುವರ್ಧನ್ ಅವರ ಕನಸಿನ ಮನೆ ‘ವಲ್ಮೀಕ’ ಅದ್ದೂರಿಯಾಗಿ ಗೃಹ ಪ್ರವೇಶ ನೆರವೇರಿದೆ. ಕಮೀ ಶುಭ ಕಾರ್ಯಕ್ಕೆ ಅನೇಕ ಗಣ್ಯರು ಭಾಗಿಯಾಗಿದ್ದರು.
ನವರಸ ನಾಯಕ ಜಗ್ಗೇಶ್ ಅವರು ಗೃಹ ಪ್ರವೇಶಕ್ಕೆ ಆಗಮಿಸಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರು ನಮಗೆಲ್ಲ ಹಿರಿಯರು. ನಮಗೆ ಶುಭ ಹಾರೈಸಿದವರು ಅವರು. ಈ ಮನೆಗೆ ಸಂಬಂಧ ಪಟ್ಟಂತೆ ಒಂದು ಬ್ಯೂಟಿಫುಲ್ ಕಥೆ ಇದೆ’ ಎಂದು ಜಗ್ಗೇಶ್ ಮಾತು ಆರಂಭಿಸಿದ ಅವರು,.
“ಮೊದಲಿಗೆ ವಿಷ್ಣುವರ್ಧನ್ ಅವರು ಇಲ್ಲೊಂದು ಮನೆ ಕಟ್ಟುತ್ತಾರೆ. ಆಗ ಪಕ್ಕದ ಸೈಟಿನ ವ್ಯಕ್ತಿ ಬಂದು, ಸರ್ ನೀವು ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀರಿ ಅಂತ ಹೇಳ್ತಾನೆ. ಆಗ ವಿಷ್ಣುವರ್ಧನ್ ಗಾಬರಿಯಾದರು. ಆದರೆ ಪಕ್ಕದ ಸೈಟಿನವರು ಎಂಥ ಅದ್ಭುತ ವ್ಯಕ್ತಿ ಎಂದರೆ, ಪರವಾಗಿಲ್ಲ ಸರ್ ಈ ಜಾಗ ಕೂಡ ನೀವೇ ಇಟ್ಕೊಳ್ಳಿ ಅಂತ ಕೊಟ್ಟರು. ಹಾಗಾಗಿ ಇಲ್ಲಿ ವಿಷ್ಣುವರ್ಧನ್ ಅವರಿಗೆ ಡಬಲ್ ಸೈಟ್ ಸಿಕ್ಕಿತು” ಎಂದು ಹೇಳಿದ್ದಾರೆ.
ವಿಷ್ಣುವರ್ಧನ್ ಅವರಿಗೆ ಇದು ಪ್ರಿಯವಾದ ಜಾಗ. ಪರಿಸರದಲ್ಲಿ ನಾನು ಇರುತ್ತೇನೆ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ. ವಿಷ್ಣುವರ್ಧನ್ ಅವರ ಮನೆಯ ಮಹಡಿಯಿಂದ ನೋಡಿದರೆ ಮಲೆನಾಡಿನಲ್ಲಿ ಇದ್ದಂತಹ ಭಾವ ಮೂಡುತ್ತದೆ. ಶುದ್ಧವಾಗಿ ಬಾಳಿದವರಿಗೆ ಭಗವಂತ ಕೊಡುವ ಆಶೀರ್ವಾದ ಇದು. ಈ ಸಂದರ್ಭದಲ್ಲಿ ಆ ಸಿಂಹ ಇದ್ದಿದ್ದರೆ ಈ ಮನೆಯ ಒಂದೊಂದು ಜಾಗದಲ್ಲಿ ಹೆಂಗೆ ಘರ್ಜನೆ ಮಾಡುತ್ತಿತ್ತು ಎಂಬ ಪ್ರಶ್ನೆ ನನ್ನ ಮನದಲ್ಲಿ ಕಾಡಿತು’ ಎಂದು ಜಗ್ಗೇಶ್ ಹೇಳಿದ್ದಾರೆ.

