ಬಾಂಗ್ಲಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಸ್ಥಾನದ ಪಡೆದು ಇಶಾನ್ ಕಿಶನ್ ಅಬ್ಬರದ ದ್ವಿಶತಕವನ್ನು ಸಿಡಿದು ಮಿಂಚಿದ್ದಾರೆ.
ಆರಂಭದಿಂದಲೂ ಬಿರುಸಿನಿಂದ ಬ್ಯಾಟ್ ಬೀಸಿದ ಇಶಾನ್ ಕಿಶನ್ ಬಾಂಗ್ಲಾ ಬೌಲರ್ ಗಳನ್ನು ಅಟ್ಟಾಡಿದರು. ಬೌಂಡರಿ ಸಿಕ್ಸರ್ ಗಳ ಸುರಿಮಳೆಯನ್ನೇ ಗೈದ ಇಶಾನ್ ಕಿಶನ್ 210 ರನ್ ಗಳನ್ನು ಗಳಿಸಿದ್ದಾರೆ.
ರೋಹಿತ್ ಶರ್ಮ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಕೊಹ್ಲಿಯೊಂದಿಗೆ 250 ರನ್ ಗಳ ಜೊತೆಯಾಟ ನೀಡಿದರು. ವಿರಾಟ್ ಕೂಹ್ಲಿಯೂ ಶತತಕ ಆಟವನ್ನು ಆಡಿದ್ದಾರೆ.
126 ಎಸೆತದಲ್ಲಿ ದ್ವಿಶತಕದ ಗಡಿ ದಾಟಿದ ಇಶಾನ್ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವೀರೆಂದ್ರ ಸೆಹವಾಗ್, ಮಾರ್ಟಿನ್ ಗಪ್ಟಿಲ್, ಗೇಲ್ ಅವರ ದಾಖಲೆಯ ಸಾಲಿಗೆ ಸೇರಿದರು. ಒಟ್ಟು 131 ಎಸೆತ ಎದುರಿಸಿದ ಇಶಾನ್ 10 ಸಿಕ್ಸರ್ ಮತ್ತು 24 ಬೌಂಡರಿ ನೆರವಿನಿಂದ 210 ರನ್ ಗೆ ಔಟಾದರು.

